cheating 
ಉಡುಪಿ

ಬ್ಯಾಂಕ್ ಖಾತೆಯಿಂದ 1,21,147 ರೂ. ಮಾಯ!

ಇಂದಿರಾ ಎನ್ ಕೆ

ಕಾಸರಗೋಡು: ಅಪರಿಚಿತ ಮೊಬೈಲ್ ನಂಬರ್‌ನಿಂದ ಕರೆ ಮಾಡಿದ ವಂಚಕರು ಬಳಿಕ ತನ್ನ ಬ್ಯಾಂಕ್ ಖಾತೆಯಿಂದ 1,21,147 ರೂ. ಲಪಟಾಯಿಸಿದ ಬಗ್ಗೆ ಹೇರೂರು ಪರ ಹೌಸ್ ನಿವಾಸಿ ಮೊಯ್ದೀನ್‌ಕುಞಿ ಎಂಬುವರು ನೀಡಿದ ದೂರು ನೀಡಿದ್ದಾರೆ.

ಕುಂಬಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜು.13ರಂದು ತನ್ನ ಮೊಬೈಲ್ ಫೋನ್‌ಗೆ ಅಪರಿಚಿತ ಕರೆಯೊಂದು ಬಂದಿತ್ತು. ಇದಾದ ನಂತರ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಫೆಡರಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಖಾತೆಗಳಿಂದ 1,21,147 ರೂ. ನಗದು ತನ್ನ ಅರಿವಿಗೆ ಬಾರದೆ ಡ್ರಾ ಮಾಡಿರುವುದಾಗಿ ಮೊಯ್ದೀನ್‌ಕುಞಿ ದೂರಿನಲ್ಲಿ ತಿಳಿಸಿದ್ದಾರೆ.