ಹಂಗಾರಕಟ್ಟೆ- ಸಾಸ್ತಾನ ರೋಟರಿ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಕುಸುಮಾ ಮನೋಜ್ ಹಾಗೂ ಕಾರ್ಯದರ್ಶಿಯಾಗಿ ಕೆ.ರಾಜಾರಾಮ್ ಐತಾಳ್ ಅಧಿಕಾರ ಸ್ವೀಕರಿಸಿದರು. ಪ್ರಮುಖರಾದ ಸಿ.ಎ.ದೇವ್ ಆನಂದ್, ವಿಜಯ ಕುಮಾರ್ ಶೆಟ್ಟಿ, ಸೀತಾರಾಮ ಎಸ್. ಉಪಸ್ಥಿತರಿದ್ದರು. 
ಉಡುಪಿ

ರೋಟರಿ ಸಾಮಾಜಿಕ ಕಾರ್ಯ ಶ್ಲಾಘನೀಯ

ಇಂದಿರಾ ಎನ್ ಕೆ
ಕೋಟ: ಅಂತಾರಾಷ್ಟ್ರೀಯ ಸಂಸ್ಥೆಯಾದ ರೋಟರಿ ಸಂಸ್ಥೆ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದೆ. ಈ ದಿಸೆಯಲ್ಲಿ ಹಂಗಾರಕಟ್ಟೆ ರೋಟರಿ ಕ್ಲಬ್ ಆರೋಗ್ಯ, ಶಿಕ್ಷಣ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ರೋಟರಿ ಕ್ಲಬ್ ನಿಕಟಪೂರ್ವ ಗವರ್ನರ್ ಸಿ.ಎ.ದೇವ್ ಆನಂದ್ ಹೇಳಿದರು.
ಬ್ರಹ್ಮಾವರದಲ್ಲಿ ಬುಧವಾರ ಹಂಗಾರಕಟ್ಟೆ-ಸಾಸ್ತಾನ ರೋಟರಿಯ 2026-27ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು.

ಹಂಗಾರಕಟ್ಟೆ- ಸಾಸ್ತಾನ ರೋಟರಿ ಅಧ್ಯಕ್ಷರಾಗಿ ಕುಸುಮಾ ಮನೋಜ್ ಹಾಗೂ ಕಾರ್ಯದರ್ಶಿಯಾಗಿ ಕೆ.ರಾಜಾರಾಮ್ ಐತಾಳ್ ಅಧಿಕಾರ ಸ್ವೀಕರಿಸಿದರು. 2026-27ನೇ ಸಾಲಿನ ಸಹಾಯಕ ಗವರ್ನರ್ ವಿಜಯ ಕುಮಾರ್ ಶೆಟ್ಟಿ, ವಲಯ ಪ್ರತಿನಿಧಿ ಸೀತಾರಾಮ ಎಸ್. ಉಪಸ್ಥಿತರಿದ್ದರು.

ನಿಕಟಪೂರ್ವ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಮುರಳಿಧರ ನಾಯರಿ ವರದಿ ಮಂಡಿಸಿದರು. ಗಣೇಶ್ ಜಿ., ಸುಲತಾ ಎಸ್.ಹೆಗ್ಡೆ, ನರೇಂದ್ರ ಕುಮಾರ್ ಕೋಟ, ಬಾಲಕೃಷ್ಣ ಪೂಜಾರಿ, ವಿಘ್ನೇಶ್ವರ ಅಡಿಗ, ಲೀಲಾವತಿ ಜಿ.ಪೂಜಾರಿ, ಮನೋಜ್ ಕುಮಾರ್ ಪರಿಚಯಿಸಿದರು. ಕಾರ್ಯದರ್ಶಿ ಕೆ.ರಾಜಾರಾಮ ಐತಾಳ್ ನಿರೂಪಿಸಿದರು.