ಕುಂತೂರು ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಜಯಪ್ರಕಾಶ್ ಅವರು ನೀಡಿದ ಕೊಡುಗೆಯನ್ನು ಮುಖ್ಯಶಿಕ್ಷಕ ರಾಮಕೃಷ್ಣ ಮಲ್ಲಾರ ಅವರಿಗೆ ಹಸ್ತಾಂತರಿಸಲಾಯಿತು. ಖಾಸಿಂ, ಚಂದ್ರಶೇಖರ ರೈ ಮತ್ತಿತರರು ಉಪಸ್ಥಿತರಿದ್ದರು.  
ಉಡುಪಿ

ಸಮಾಜ ಸೇವೆಗಾಗಿ ಗುರುತಿಸಿಕೊಂಡ ರೋಟರಿ

ಇಂದಿರಾ ಎನ್ ಕೆ
ಸುಬ್ರಹ್ಮಣ್ಯ: ರೋಟರಿ ಸಂಸ್ಥೆಯು ಮುಖ್ಯವಾಗಿ ಸವಾಜ ಸೇವೆಗಾಗಿ ಸ್ಥಾಪನೆಯಾಗಿದೆ. ಸಮಾಜದಲ್ಲಿರುವ ಅಶಕ್ತರ ಸೇವೆ ನಿರಂತರವಾಗಿ ಸಂಸ್ಥೆ ಮಾಡುತ್ತಾ ಬಂದಿದೆ. ಜತೆಗೆ ಶಾಲಾ ಕಾಲೇಜುಗಳಿಗೆ ಮೂಲಸೌಕರ್ಯಗಳ ಒದಗಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆ ಗುರುತಿಸಿಕೊಂಡಿದೆ ಎಂದು ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಆರ್.ನುಡಿದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಕುಂತೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಕೊಡವಾಡಿದ ಕೊಡುಗೆಗಳನ್ನು ಮಂಗಳವಾರ ಹಸ್ತಾಂತರಿಸಿ ಮಾತನಾಡಿದರು.

ದಿ.ವಿಠಲ್ ರಾವ್ ಬಿ. ಸ್ಮರಣಾರ್ಥ ಅವರ ಪುತ್ರಿ ರಕ್ಷಾ ರಾವ್ ಕೊಡವಾಡಿದ ಕುರ್ಚಿಗಳನ್ನು ಮುಖ್ಯಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ನಿವೃತ್ತ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಗೌಡ ಕೊಡಮಾಡಿದ ಟೀಪಾಯ್ ಶಾಲೆಗೆ ನೀಡಲಾಯಿತು.
ಕಡಬ ಪೊಲೀಸ್ ಠಾಣೆ ಉಪನಿರೀಕ್ಷಕ ಜಂಬುರಾಜ್ ಮಹಾಜನ್ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಖಾಸಿಂ, ಹಳೇ ವಿದ್ಯಾರ್ಥಿ ಸಂದ ಗೌರವಾಧ್ಯಕ್ಷ ಚಂದ್ರಶೇಖರ ರೈ, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ರೋಹಿತ್ ಬಿ.ಬಿ., ಮುಖ್ಯಶಿಕ್ಷಕ ರಾಮಕೃಷ್ಣ ಮಲ್ಲಾರ, ರೋಟರಿ ಪೂರ್ವಾಧ್ಯಕ್ಷರಾದ ಉಮೇಶ ಕೆ.ಎನ್., ವಿಶ್ವನಾಥ್ ನಡುತೋಟ, ಗೋಪಾಲ ಎಣ್ಣೆಮಜಲ್, ಮಾಯಿಲಪ್ಪ ಸಂಕೇಸ, ಪೂರ್ವ ಕಾರ್ಯದರ್ಶಿ ಡಾ.ರವಿ ಕಕ್ಕೆಪದವು, ಪಾಲಕರು ಉಪಸ್ಥಿತರಿದ್ದರು. ಶಿಕ್ಷಕಿ ಶ್ರುತಿ ಬಿ.ಎಚ್. ಸ್ವಾಗತಿಸಿದರು.