ಉಡುಪಿಯ ಮಣಿಪಾಲದಲ್ಲಿ ಆಯೋಜಿಸಿದ್ದ 'ರಂಗ್​ ತರಂಗ್​' ಸ್ಪರ್ಧೆಯಲ್ಲಿ ಸಮಗ್ರ ರನ್ನರ್​ ಅಪ್​ ಪ್ರಶಸ್ತಿ ಗಳಿಸಿದ ರೋಟರಿ ಕ್ಲಬ್​ ಐಸಿರಿ ಪರ್ಕಳ ತಂಡ. 
ಉಡುಪಿ

ರೋಟರಿ ಕ್ಲಬ್​ ಐಸಿರಿ ಪರ್ಕಳಕ್ಕೆ ಸಮಗ್ರ ರನ್ನರ್​ ಅಪ್​ ಪ್ರಶಸ್ತಿ

* 'ರಂಗ್​ ತರಂಗ್​' ಸಾಂಸ್ಕೃತಿಕ ಸಮ್ಮಿಲನ ಸ್ಪರ್ಧೆ

ಉಡುಪಿ: ಮಣಿಪಾಲದಲ್ಲಿ ಇತ್ತೀಚೆಗೆ ನಡೆದ ರೋಟರಿ ಜಿಲ್ಲೆ 3182ರ ವಲಯ-4ರ 'ರಂಗ್​ ತರಂಗ್​' ಸಾಂಸ್ಕೃತಿಕ ಸಮ್ಮಿಲನ ಸ್ಪರ್ಧೆಯಲ್ಲಿ ರೋಟರಿ ಕ್ಲಬ್​ ಐಸಿರಿ ಪರ್ಕಳ ತಂಡವು ಸಮಗ್ರ ರನ್ನರ್​ ಅಪ್​ ಪ್ರಶಸ್ತಿ ಗಳಿಸಿದೆ.

ಐಸಿರಿ ಕುಟುಂಬದ 22 ಸ್ಪರ್ಧಿಗಳು ಏಳು ಸ್ಪರ್ಧೆಗಳಲ್ಲೂ ಭಾಗವಹಿಸಿ ಸಾಧನೆ ಮಾಡಿದೆ. ಸಮೂಹ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಯುಗಳ ಗೀತೆ ಸ್ಪರ್ಧೆಯಲ್ಲಿ ರೊ. ಗುರುಪ್ರಸಾದ ಕಾಮತ ಮತ್ತು ಅನ್ನೆಟ್​ ಯಶಾ ಕಾಮತ ನೇತೃತ್ವದಲ್ಲಿ ದ್ವಿತೀಯ ಸ್ಥಾನ ಗಳಿಸಿದೆ.

ಗಾಯನ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ರೊ. ವೆಂಕಟೇಶ ಭಟ್​ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ರೊ. ಡಾ. ಸ್ವಾತಿ ಪೈ ತೃತೀಯ, ರೊ. ಕೃಷ್ಣಪ್ಪ ನಿರ್ದೇಶನದ ಕಿರುನಾಟಕ ತಂಡವು ತೃತೀಯ ಸ್ಥಾನ ಗಳಿಸಿ ಕ್ಲಬ್​ನ ಕೀರ್ತಿ ಹೆಚ್ಚಿಸಿದೆ ಎಂದು ಕ್ಲಬ್​ ಅಧ್ಯಕ್ಷ ರೊ. ಸಂದೀಪಕುಮಾರ ತಿಳಿಸಿದ್ದಾರೆ.