ಶ್ರೀಕೃಷ್ಣಮಂದಿರಕ್ಕೆ ರಾರ್ಬಟ್ ವಾದ್ರಾ ಶುಕ್ರವಾರ ಭೇಟಿ ನೀಡಿದರು.
ಉಡುಪಿ: ನವದೆಹಲಿಯ ವಸಂತ್ ಕುಂಜ್ನಲ್ಲಿರುವ ಉಡುಪಿ ಪೇಜಾವರ ಮಠದ ಶಾಖೆ ಶ್ರೀಕೃಷ್ಣಮಂದಿರಕ್ಕೆ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಪತಿ ರಾರ್ಬಟ್ ವಾದ್ರಾ ಶುಕ್ರವಾರ ಭೇಟಿ ನೀಡಿದರು.
ಮಠದ ಸನಿಹದಲ್ಲಿ ಏರ್ಪಡಿಸಿದ್ದ ಖಾಸಗಿ ಸಮಾರಂಭಕ್ಕೆ ಆಗಮಿಸಿದ್ದ ಅವರು, ಕೃಷ್ಣಮಂದಿರಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು. ಬಳಿಕ ಗುರುಕುಲದ ವಿದ್ಯಾರ್ಥಿಗಳೊಂದಿಗೆ ಆತ್ಮೀಯ ಸಮಾಲೊಚನೆ ನಡೆಸಿದರು. ಮಠದ ಪ್ರಧಾನ ವ್ಯವಸ್ಥಾಪಕ ಡಾ. ವಿಠೋಬಾಚಾರ್ಯ , ಅರ್ಚಕ ಸುಮನ್ ಆಚಾರ್ಯ ಗೌರವಿಸಿದರು.