ಕೀರ್ತಿನಗರ ವೃತ್ತ ಬಳಿಯ ರಸ್ತೆ ಗುಂಡಿ ಮುಚ್ಚಿದ ಡಯಾನಾ ಸೆರಾವೊ ನೇತೃತ್ವದಲ್ಲಿ ದುರಸ್ತಿಗೊಳಿಸಲಾಯಿತು.  
ಉಡುಪಿ

ಮಾಜಿ ಸದಸ್ಯೆಯಿಂದ ರಸ್ತೆ ಗುಂಡಿ ದುರಸ್ತಿ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಮಹಾವೀರ ಕಾಲೇಜು ಕೀರ್ತಿ ನಗರ ವೃತ್ತದ ಸಮೀಪ ರಸ್ತೆಯಲ್ಲಿ ಉಂಟಾಗಿದ್ದ ಅಪಾಯಕಾರಿ ಗುಂಡಿಗಳನ್ನು ಮೂಡುಬಿದಿರೆ ಪುರಸಭೆ ಮಾಜಿ ಸದಸ್ಯೆ, ಅಲಂಗಾರು ಲಯನ್ಸ್ ಕ್ಲಬ್ ಉಪಾಧ್ಯಕ್ಷೆ ಡಯಾನಾ ಸೆರಾವೊ ನೇತೃತ್ವದಲ್ಲಿ ಮುಚ್ಚಲಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಗುಂಡಿಗಳಿಂದ ದ್ವಿಚಕ್ರ ವಾಹನ ಸವಾರರು ನಿರಂತರವಾಗಿ ಅಪಘಾತಕ್ಕೀಡಾಗುತ್ತಿದ್ದ ಹಿನ್ನೆಲೆಯಲ್ಲಿ ಡಯಾನಾ ಸೆರಾವೊ ಸ್ವಯಂಪ್ರೇರಿತರಾಗಿ ಸ್ಥಳೀಯರ ಸಹಕಾರದೊಂದಿಗೆ ಗುಂಡಿಗಳನ್ನು ಮುಚ್ಚುವ ಮೂಲಕ ಮಾದರಿ ನಾಗರಿಕ ಸೇವೆ ಸಲ್ಲಿಸಿದರು.
ಈ ಕಾರ್ಯಕ್ಕೆ ಅಲಂಗಾರು ಲಯನ್ಸ್ ಕ್ಲಬ್ ಸದಸ್ಯ ವಲೆರಿಯನ್ ಪಿಂಟೋ ಹಾಗೂ ಸ್ಥಳೀಯ ಅಕ್ಷಯ್ ಕೈ ಜೋಡಿಸಿದರು.
ಕಾಮಗಾರಿ ವೇಳೆ ನಿರ್ಮಾಣ ಸಾಮಗ್ರಿಗಳ ಕೊರತೆ ಎದುರಾದಾಗ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಯುವ ಉದ್ಯಮಿ ಅಜಯ್ ಶೆಟ್ಟಿ ತಮ್ಮ ವಾಹನದಲ್ಲಿದ್ದ ಅಗತ್ಯ ಸಾಮಗ್ರಿಗಳನ್ನು ಉಚಿತವಾಗಿ ನೀಡಿ ನೆರವಾದರು.

ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯ ಗುಂಡಿಗಳನ್ನು ಮುಚ್ಚಿರುವುದರಿಂದ ವಾಹನ ಸವಾರರಿಗೆ ಅನುಕೂಲವಾಗಿದೆ.