ಎಣ್ಮಕಜೆ ಪಂಚಾಯಿತಿಯ ಅಜಿಲಡ್ಕ-ಪರ್ತಜೆ ರಸ್ತೆ ಕಾಮಗಾರಿ ಪೂರ್ಣಗೊಂಡ ಮೂರು ತಿಂಗಳೊಳಗೆ ಶಿಥಿಲವಾಗಿರುವುದು.
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಎಣ್ಮಕಜೆ ಪಂಚಾಯಿತಿಯ ಅಜಿಲಡ್ಕ-ಪರ್ತಾಜೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದು ಮೂರು ತಿಂಗಳು ಪೂರ್ಣಗೊಳ್ಳುವ ಮೊದಲೇ ಶಿಥಿಲಾವಸ್ಥೆ ತಲುಪಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಾಯಿತಿ ಅನುದಾನ ಮೂಲಕ ರಸ್ತೆಯನ್ನು 615 ಮೀಟರ್‌ವರೆಗೆ ಸುಮಾರು 11 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟೀಕರಣ ಹಾಗೂ ಡಾಂಬರೀಕರಣದೊಂದಿಗೆ ಅಭಿವೃದ್ಧಿಪಡಿಸಲಾಗಿತ್ತು. ಕಾಮಗಾರಿ ಪೂರ್ಣವಾಗಿ ಮೂರು ತಿಂಗಳು ಕಳೆಯುತ್ತಿದ್ದಂತೆ ರಸ್ತೆಯ ಡಾಂಬರು ಹಾಗೂ ಕಾಂಕ್ರೀಟ್ ಕಿತ್ತು ಬರಲಾರಂಭಿಸಿವೆ. ಮಳೆಗಾಲದಲ್ಲಿ ಅತ್ಯಂತ ಶಿಥಿಲಗೊಳ್ಳುವ ರಸ್ತೆಯಾಗಿದ್ದು ಕಾಂಕ್ರೀಟೀಕರಣದ ಬಗ್ಗೆ ಸಂತೋಷಗೊಂಡಿದ್ದ ಊರಿನ ಜನರಿಗೆ ಈಗ ನಿರಾಸೆಯಾಗಿದೆ.
ಕಳಪೆ ಕಾಮಗಾರಿಯ ಬಗ್ಗೆ ಸ್ಥಳೀಯ ಮತದಾರರು ವಿಜಿಲೆನ್ಸ್‌ಗೆ ದೂರು ಸಲ್ಲಿಸಿದ್ದು, ಸಮಗ್ರ ತನಿಖೆ ನಡೆಸಿ ಕಳಪೆ ಕಾಮಗಾರಿಗೆ ಕಾರಣರಾದವರನ್ನು ಪತ್ತೆಹಚ್ಚಿ ಶಿಕ್ಷಿಸುವಂತೆ ಆಗ್ರಹಿಸಲಾಗಿದೆ.
********************************