ACCIDENT 
ಉಡುಪಿ

ಬೈಕ್‌ಗೆ ರಿಕ್ಷಾ ಡಿಕ್ಕಿಯಾಗಿ ಸವಾರಗೆ ಗಾಯ

ಕುಂದಾಪುರ: ಗುಜ್ಜಾಡಿ ಗ್ರಾಮದ ನಾಯಕವಾಡಿಯ ವೈನ್ ಶಾಪ್ ಬಳಿ ಬೈಕ್‌ಗೆ ಗೂಡ್ಸ್ ರಿಕ್ಷಾ ಡಿಕ್ಕಿಯಾಗಿ ಬೈಕ್ ಸವಾರ ಗಂಗಾಧರ ಎಂಬುವರು ಗಾಯಗೊಂಡಿದ್ದಾರೆ.
ಅವರು ತ್ರಾಸಿಯಿಂದ ಗಂಗೊಳ್ಳಿ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಗೂಡ್ಸ್ ರಿಕ್ಷಾ ಚಾಲಕ ದಿನೇಶ ಎಂಬುವರು ಅತಿ ವೇಗ ಹಾಗೂ ಅಜಾಗರೂತೆಯಿಂದ ರಿಕ್ಷಾ ಚಲಾಯಿಸಿ, ಏಕಾಏಕಿ ಯೂಟರ್ನ್ ಮಾಡಿದ ಪರಿಣಾಮ ಅಪಘಾತ ಸಂಭವಿಸಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.