ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಡಿಸ್ಟಿಂಕ್ಷನ್ ಪಡೆದ ಎನ್‌ಎಸ್‌ಎಸ್ ಸ್ವಯಂಸೇವಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಸೋಮಶೇಖರ ನಾಯಕ್, ಉವಾಕುವಾರಿ, ಅಜಿತ್ ಕುವಾರ್ ಪಾಲೇರಿ, ಸೌವ್ಯಾ ದಿನೇಶ್ ಮತ್ತಿತರರು ಇದ್ದರು. 
ಉಡುಪಿ

ಸಮಾಜಮುಖಿ ವ್ಯಕ್ತಿತ್ವ ಅನಾವರಣ ಅತ್ಯಗತ್ಯ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಎನ್‌ಎಸ್‌ಎಸ್ ರಹದಾರಿಯಾಗಿದೆ. ಇದು ಕೇವಲ ಒಂದು ಯೋಜನೆಯಾಗಿರದೆ ನಾಯಕತ್ವ ಗುಣ ಬೆಳೆಸಲು, ಪ್ರತಿಭಾ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ. ಯುವಮನಸ್ಸುಗಳಲ್ಲಿ ಸವಾಜಮುಖಿ ವ್ಯಕ್ತಿತ್ವದ ಅನಾವರಣ ಅತ್ಯಗತ್ಯ. ಇದಕ್ಕೆ ಎನ್‌ಎಸ್‌ಎಸ್ ಪೂರಕವಾಗಿದೆ ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಹೇಳಿದರು.
ಸುಬ್ರಹ್ಮಣ್ಯ ಎಸ್‌ಎಸ್‌ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಟಕದ 2026-27ನೇ ಸಾಲಿನ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ವಿದಾಯ ಸವಾರಂಭದ ಅಧ್ಯಕ್ಷತೆ ವಹಿಸಿ ವಾತನಾಡಿದರು.
ನೆಟ್‌ಬಾಲ್ ಟೂರ್ನಮೆಂಟ್‌ನಲ್ಲಿ ಚಿನ್ನದ ಪದಕ ವಿಜೇತೆ ತಪಸ್ಯಾ ಎಸ್.ನಾಯಕ್ ಅವರನ್ನು ಸನ್ಮಾನಿಸಲಾಯಿತು. ಡಿಸ್ಟಿಂಕ್ಷನ್ ಪಡೆದ ಎನ್‌ಎಸ್‌ಎಸ್ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಬೆಳ್ಳಾರೆಯ ಕೆಪಿಎಸ್ ಪ್ರೌಢಶಾಲೆ ಉಪಪ್ರಾಂಶುಪಾಲೆ ಉವಾಕುವಾರಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್ ಕುವಾರ್ ಪಾಲೇರಿ, ಕಾಲೇಜಿನ ಶಿಕ್ಷಕ ರಕ್ಷಕ ಸಂದ ಅಧ್ಯಕ್ಷ ಗುಣವರ್ಧನ ಕೆದಿಲ, ಟಕದ ಯೋಜನಾಧಿಕಾರಿಗಳಾದ ಸೌವ್ಯಾ ದಿನೇಶ್, ಪೂರ್ಣಿವಾ, ಟಕದ ನಾಯಕರಾದ ಸುಧೀಕ್ಷಾ ಕುಂದರ್, ಬಿಪಿನ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಸ್ವಯಂಸೇವಕಿ ಅಭಿಜ್ಞಾ ನಿರೂಪಿಸಿದರು.