ಕೊಲ್ಲೂರು ಗ್ರಾಮದ ಸಲಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ಥಳೀಯ ದಾನಿ ನಯನಾ ರಮೇಶ್ ಗಾಣಿಗ ಕೊಡಮಾಡಿದ ನೂತನ ದ್ವಾರ ಹಾಗೂ ನಾಮಫಲಕವನ್ನು ಕೆ.ಬಾಬು ಶೆಟ್ಟಿ ಉದ್ಘಾಟಿಸಿದರು. ಪ್ರಮುಖರಾದ ಭುಜಂಗ, ಕೊಲ್ಲೂರು ರಮೇಶ ಗಾಣಿಗ, ಜಯಪ್ರಕಾಶ್ ಶೆಟ್ಟಿ, ನೇತ್ರಾವತಿ ಆಚಾರ್ಯ, ಪ್ರಕಾಶ್ ಪೂಜಾರಿ ಮತ್ತಿತರರು ಇದ್ದರು.  
ಉಡುಪಿ

ಸರ್ಕಾರಿ ಶಾಲೆ ಉಳಿಸಿಕೊಳ್ಳುವ ಜವಾಬ್ದಾರಿ

ಇಂದಿರಾ ಎನ್ ಕೆ

ಬೈಂದೂರು: ದೇವಾಲಯ ಮತ್ತು ಶಾಲೆ ಊರಿನ ಎರಡು ಕಲಶವಿದ್ದಂತೆ. ಶಾಲೆಗಳು ನಶಿಸಿಹೋದರೆ ಮುಂದಿನ ಪೀಳಿಗೆಗೆ ಸಮಸ್ಯೆಯಾಗಬಹುದು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಹೇಳಿದರು.

ಕೊಲ್ಲೂರು ಗ್ರಾಮದ ಸಲಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಸ್ಥಳೀಯ ದಾನಿ ನಯನಾ ರಮೇಶ್ ಗಾಣಿಗ ಅವರು ಕೊಡಮಾಡಿದ ನೂತನ ದ್ವಾರ ಹಾಗೂ ನಾಮಫಲಕವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಭುಜಂಗ ಅಧ್ಯಕ್ಷತೆ ವಹಿಸಿದ್ದರು. ದಾನಿ ಕೊಲ್ಲೂರು ರಮೇಶ ಗಾಣಿಗ, ಗ್ರಾಪಂ ಮಾಜಿ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ನೇತ್ರಾವತಿ ಆಚಾರ್ಯ, ಪ್ರಕಾಶ್ ಪೂಜಾರಿ, ಪ್ರೇಮಾ, ಮಾಜಿ ಉಪಾಧ್ಯಕ್ಷ ರಾಧಾಚಂದ್ರ ಘೋಷ್, ತಾಪಂ ಮಾಜಿ ಸದಸ್ಯೆ ಗ್ರೀಷ್ಮಾ ಗಿರಿಧರ ಭಿಡೆ, ಕೊಲ್ಲೂರು ಸಹಕಾರಿ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಚಂದ್ರಶೇಖರ ಅಡಿಗ, ಚಂದ್ರ ಬಳೆಗಾರ, ಸಂದೀಪ್ ಆರ್., ಬ್ರಹ್ಮಾವರ ಸಕ್ಕರೆ ಕಾರ್ಖಾನೆ ನಿರ್ದೇಶಕ ರಂಗ ನಾಯ್ಕ, ಹಿರಿಯರಾದ ರಘು ಗೌಡ, ವಾಸು ಮೊಗವೀರ, ಶಾಲಾ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಭಾಕರ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ವಿನಾಯಕ ಆಚಾರ್ಯ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಮಂಜುನಾಥ ಸ್ವಾಗತಿಸಿದರು. ಗೌರವ ಶಿಕ್ಷಕಿ ರಾಧಿಕಾ ರಾವ್ ನಿರೂಪಿಸಿದರು. ರಾಧಾಕೃಷ್ಣ ವಂದಿಸಿದರು.

ಇಂದಿನ ಕಾಲಘಟ್ಟದಲ್ಲಿ ಸರ್ಕಾರ ಹಲವು ರೀತಿಯ ಉಚಿತ ಯೋಜನೆಗಳನ್ನು ಮಕ್ಕಳಿಗೆ ನೀಡುವ ಮೂಲಕ ಶಿಕ್ಷಣಕ್ಕೆ ಉತ್ತಮ ಅವಕಾಶಗಳನ್ನು ಕೊಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಗ್ರಾಮಸ್ಥರು ಸಹಕರಿಸಬೇಕು. ಈ ಪರಿಸರಕ್ಕೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಕಾನೂನಿನ ಇತಿಮಿತಿಯಲ್ಲಿ ದೇವಸ್ಥಾನದಿಂದ ಒದಗಿಸಲು ಬದ್ಧ.

— ಕೆ.ಬಾಬು ಶೆಟ್ಟಿ, ಅಧ್ಯಕ್ಷ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ವ್ಯವಸ್ಥಾಪನಾ ಸಮಿತಿ