ಕತಾರ್​ನಲ್ಲಿರುವ ಭಾರತೀಯ ಸಾಂಸತಿಕ ಕೇಂದ್ರ(ಐಸಿಸಿ) 2023&24ರ ವ್ಯವಸ್ಥಾಪಕ ಸಮಿತಿಯನ್ನು ಭಾರತದ ರಾಯಭಾರ ಕಚೇರಿ ಸನ್ಮಾನಿಸಿತು. ಪ್ರಮುಖರಾದ ಡಾ.ವೈಭವ್​ ಎ.ತಂಡಲೆ, ವಿಪುಲ್​, ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತಿತರರಿದ್ದರು. 
ಉಡುಪಿ

ಐಸಿಸಿ ವ್ಯವಸ್ಥಾಪನಾ ಸಮಿತಿಗೆ ಗೌರವ

ಪ್ರಮುಖ ಮುಖ್ಯಾಂಶಗಳು

  • ಭಾರತದ ರಾಯಭಾರ ಕಚೇರಿಯಿಂದ ಪುರಸ್ಕಾರ
  • ಎಲ್ಲ ಸದಸ್ಯರಿಗೆ ಪ್ರಮಾಣಪತ್ರ ವಿತರಣೆ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕತಾರ್​ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡಿದ ವಿಶಿಷ್ಟ ಮತ್ತು ನಿಸ್ವಾರ್ಥ ಸೇವೆಗಾಗಿ ಭಾರತೀಯ ಸಾಂಸತಿಕ ಕೇಂದ್ರ(ಐಸಿಸಿ)ದ 2023&24ರ ವ್ಯವಸ್ಥಾಪಕ ಸಮಿತಿಯನ್ನು ಭಾರತದ ರಾಯಭಾರ ಕಚೇರಿ ಭಾನುವಾರ ಸನ್ಮಾನಿಸಿತು.

ಎಲ್ಲ ಸದಸ್ಯರಿಗೆ ಪ್ರಮಾಣಪತ್ರ ಪ್ರದಾನ:

ಭಾರತೀಯ ರಾಯಭಾರ ಕಚೇರಿ ಕೌನ್ಸಿಲರ್​ ಡಾ.ವೈಭವ್​ ಎ.ತಂಡಲೆ ಉಪಸ್ಥಿತಿಯಲ್ಲಿ ಕತಾರ್​ಗೆ ಭಾರತದ ರಾಯಭಾರಿಯಾಗಿರುವ ವಿಪುಲ್​, ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಐಸಿಸಿ ವ್ಯವಸ್ಥಾಪಕ ಸಮಿತಿಯ ಎಲ್ಲ ಸದಸ್ಯರಿಗೆ ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ಗೌರವಿಸಲಾಯಿತು.

ಬೈಂದೂರು ಮೂಲ:

ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಬೈಂದೂರು ಮೂಲದವರು. ಕಳೆದ 2 ದಶಕಗಳಿಂದ ಕತಾರ್​ನಲ್ಲಿ ವಾಸಿಸುತ್ತಿರುವ ಅವರು, ಐ.ಸಿ.ಬಿ.ಎಫ್​ ಜಂಟಿ ಕಾರ್ಯದರ್ಶಿಯಾಗಿ, ಕರ್ನಾಟಕ ಸಂಘ ಕತಾರ್​ನ ಉಪಾಧ್ಯಕ್ಷರಾಗಿ, ಭಾರತೀಯ ಸಾಂಸತಿಕ ಕೇಂದ್ರದ ಉಪಾಧ್ಯಕ್ಷರಾಗಿ ಮತ್ತು ಪ್ರಸ್ತುತ ಕರ್ನಾಟಕ ಸಂಘ ಕತಾರ್​ನ ಅಧ್ಯಕ್ಷರಾಗಿ ಭಾರತೀಯ ಸಮುದಾಯಕ್ಕೆ ವಿವಿಧ ಹುದ್ದೆಗಳಲ್ಲಿ ಸೇವೆಯಲ್ಲಿ ಸಲ್ಲಿಸುತ್ತಿದ್ದಾರೆ.