ಅರಸಮ್ಮಕಾನು ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳ ಸಭಾಂಗಣದಲ್ಲಿ ರಿಷಾ ಆರ್.ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ ನಡೆಯಿತು. ಪ್ರಮುಖರಾದ ಬಾಲಕೃಷ್ಣ ಅಲ್ಸೆ, ರಾಧಕೃಷ್ಣ ಕ್ರಮಧಾರಿ, ಸೀತಾನದಿ ವಿಠ್ಠಲ ಶೆಟ್ಟಿ, ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ, ರಾಜೀವ ಶೆಟ್ಟಿ ಬೆಪ್ಡೆ, ಮೋಹನದಾಸ್ ಹೆಗ್ಡೆ ಕುದ್ರುಬೀಡು,ನಾಗರಾಜ ಬಾಯರಿ ಗಂಗಡಬೈಲು, ಕೆ.ಸುಧಾಕರ ಶೆಟ್ಟಿ ಅರಸಮ್ಮಕಾನು ಉಪಸ್ಥಿತರಿದ್ದರು.
ಯಾವುದೇ ಸಾಧನೆ ಹಿಂದೆ ಸಾಕಷ್ಟು ಶ್ರಮವಿರುತ್ತದೆ. ಸಾಧನೆ ಮಾಡಿದವರನ್ನು ಗುರುತಿಸುವುದರಿಂದ ಇನ್ನಷ್ಟು ಸಾಧನೆಗೆ ಪ್ರೇರಣೆಯಾಗಲಿದೆ. ಸಾಧಕರನ್ನು ಗೌರವಿಸುವ ಕಾರ್ಯ ಶ್ರೇಷ್ಠವಾದದ್ದು ಎಂದು ಮಂಗಳೂರು ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಹೇಳಿದರು.
ಅರಸಮ್ಮಕಾನು ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳ ಸಭಾಂಗಣದಲ್ಲಿ ಶೇಡಿಮನೆ ಅರಸಮ್ಮಕಾನು ನೆರಳು ಚಾರಿಟೆಬಲ್ ಟ್ರಸ್ಟ್ ಹಾಗೂ ಅರಸಮ್ಮಕಾನು ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳ ವ್ಯವಸ್ಥಾಪನಾ ಸಮಿತಿ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅರಸಮ್ಮಕಾನು ನೆರಳು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ರಾಧಕೃಷ್ಣ ಕ್ರಮಧಾರಿ ಅಧ್ಯಕ್ಷತೆ ವಹಿಸಿದ್ದರು. ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ಹೆಬ್ರಿ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ, ನಿವೃತ್ತ ಶಿಕ್ಷಕ ರಾಜೀವ ಶೆಟ್ಟಿ ಬೆಪ್ಡೆ, ಅರಸಮ್ಮಕಾನು ಶ್ರೀನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನದಾಸ್ ಹೆಗ್ಡೆ ಕುದ್ರುಬೀಡು, ಅರ್ಚಕ ನಾಗರಾಜ ಬಾಯರಿ ಗಂಗಡಬೈಲು, ಹೆಬ್ರಿ ತಾಲೂಕು ಜನ ಜಾಗೃತಿ ವೇದಿಕೆ ಸದಸ್ಯ ಸುಧಾಕರ ಶೆಟ್ಟಿ ಅರಸಮ್ಮಕಾನು, ಪ್ರೇಮಾ ಎಸ್.ಉಡುಪ ಗೋಳಿಯಂಗಡಿ, ರಾಘವೇಂದ್ರ, ಮಲ್ಲಿಕಾ ಶೆಟ್ಟಿ ಶಾಂದ್ರಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ರಾಜೀವ ಪೂಜಾರಿ ಶೇಡಿಮನೆ ಸ್ವಾಗತಿಸಿದರು. ರಾಧಕೃಷ್ಣ ಕ್ರಮದಾರಿ ಪ್ರಾಸ್ತಾವಿಕ ಮಾತನಾಡಿದರು. ಸುಧಾಕರ ಶೆಟ್ಟಿ ಅರಸಮ್ಮಕಾನು, ಲೀಲಾವತಿ ಉಡುಪ ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕ ಶಶಿಧರ ಶೆಟ್ಟಿ ಶಾಂದ್ರಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಎಸ್.ಪ್ರವೀಣ ಕುಮಾರ್ ಶೆಟ್ಟಿ ವಂದಿಸಿದರು.
ಹುಟ್ಟೂರ ಸನ್ಮಾನ
ವೈದ್ಯಕೀರ್ತಿ-ಯೋಗಸ್ಫೂರ್ತಿ ಕಾರ್ಯಕ್ರಮ ಅಂಗವಾಗಿ ಗೋಳಿಯಂಗಡಿ ವೈದ್ಯ ಡಾ.ಎಸ್.ಪರಮೇಶ್ವರ ಉಡುಪ ಅವರಿಗೆ ಹುಟ್ಟೂರ ಸನ್ಮಾನ ನಡೆಯಿತು. ಜಪಾನ್ ದೇಶದಲ್ಲಿ ನಡೆಯುವ ಏಷಿಯನ್ ಗೇಮ್‌ಗೆ ಆಯ್ಕೆಯಾದ ಶೇಡಿಮನೆ ಅರಸಮ್ಮಕಾನು ಶಾಂದ್ರಬೆಟ್ಟು ರಿಷಾ ಆರ್.ಶೆಟ್ಟಿಗೆ ಹುಟ್ಟೂರ ಸನ್ಮಾನ, ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ರಿಷಾ ಆರ್.ಶೆಟ್ಟಿಯಿಂದ ಯೋಗ ಪ್ರದರ್ಶನ ನಡೆಯಿತು.