ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂದ ಸಭಾಭವನದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಸಂದ ಅಧ್ಯಕ್ಷ ಮುದ್ರಾಡಿ ಕೇಶವ ಆಚಾರ್ಯ ಮಾತನಾಡಿದರು. 
ಉಡುಪಿ

ವಿಶ್ವಕರ್ಮ ಸಮುದಾಯ ಭವನ ನಿರ್ಮಾಣ ಸಂಕಲ್ಪ

ಇಂದಿರಾ ಎನ್ ಕೆ
ಹೆಬ್ರಿ: 2028ರಲ್ಲಿ ನಡೆಯುವ ಸುವರ್ಣ ಸಂಭ್ರಮಕ್ಕೆ 2 ವರ್ಷದ ಮೊದಲೇ ಕಾರ್ಯಯೋಜನೆ ಸಿದ್ಧಪಡಿಸುತ್ತಿರುವುದು ಅತ್ಯಂತ ಸೂಕ್ತ ಮತ್ತು ಶ್ಲಾನೀಯ ವಿಚಾರ. ಅತೀ ಬೇಗ ಕಾರ್ಯಪ್ರವೃತ್ತರಾದರೆ ಗುರಿಮುಟ್ಟಲು ಸಾಧ್ಯವಾಗುತ್ತದೆ. ಸುವರ್ಣ ಸಂಭ್ರಮದ ಸವಿನೆನಪಿಗಾಗಿ ಸಂಕ್ಕೆ ಭವ್ಯವಾದ ಸಮುದಾಯ ಭವನ ತಮ್ಮೆಲ್ಲರ ಸಹಕಾರದಿಂದ ನಿರ್ಮಿಸಿ ಲೋಕಾರ್ಪಣೆ ವಾಡಬೇಕೆಂದು ಎಲ್ಲರ ಕನಸಾಗಿದೆ. ಸರ್ವರೂ ಕೈಜೋಡಿಸಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ವಿಶ್ವಕರ್ಮ ಸಮಾಜದ ಮುಖಂಡ ಹೆಬ್ರಿ ಟಿ.ಜಿ.ಆಚಾರ್ಯ ಹೇಳಿದರು.
ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂದ ಸಭಾಭವನದಲ್ಲಿ ಭಾನುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಹೆಬ್ರಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂ ಅಧ್ಯಕ್ಷ ಮುದ್ರಾಡಿ ಕೇಶವ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಚ್.ಎಂ.ಶಶಿಶಂಕರ್, ಹೆಬ್ರಿ ಶ್ರೀ ವಿಶ್ವಕರ್ಮಮಹಿಳಾ ಮಂಡಳಿ ಗೌರವಾಧ್ಯಕ್ಷೆ ಪ್ರೇವಾ ಎಂ ವರಂಗ, ಕಲಾವತಿ ಶ್ರೀಧರ ಆಚಾರ್ಯ, ಹೆಬ್ರಿ ಶ್ರೀ ವಿಶ್ವಕರ್ಮ ಯುವ ವೃಂದದ ಅಧ್ಯಕ್ಷ ಸಂತೋಷ ಆಚಾರ್ಯ, ಪ್ರಮುಖರಾದ ಬಿ.ಎಂ.ಶೇಖರ ಆಚಾರ್ಯ, ಎಚ್.ರಮೇಶ ಆಚಾರ್ಯ, ರಾಮಕೃಷ್ಣ ಆಚಾರ್ಯ, ನರಸಿಂಹ ಆಚಾರ್ಯ ವರಂಗ, ರತ್ನಾಕರ ಆಚಾರ್ಯ ಶಿವಪುರ, ಸುರೇಂದ್ರ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಎಚ್.ಎಂ.ಶಶಿಶಂಕರ್ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.