ವೀರಕಂಭ ಗ್ರಾಮದ ಟಾಸ್ಕ್ ಫೋರ್ಸ್ ಸಮಿತಿ ಸಭೆ ಗ್ರಾಪಂ ಆಡಳಿತಾಧಿಕಾರಿ ದಿನೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ವೀರಕಂಭ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ ಶರ್ಮಾ, ಅಂಗನವಾಡಿ ಮೇಲ್ವಿಚಾರಕಿ ರೂಪಕಲಾ ಮತ್ತಿತರರಿದ್ದರು.  
ಉಡುಪಿ

ಮಳೆಗಾಲ ಪೂರ್ವ ಸ್ವಚ್ಛತೆಗೆ ನಿರ್ಣಯ

ಬಂಟ್ವಾಳ: ವೀರಕಂಭ ಗ್ರಾಪಂ ವ್ಯಾಪ್ತಿಯಲ್ಲಿ ಮಳೆಗಾಲದ ಮುನ್ನೆಚ್ಚರಿಕೆಯ ಪೂರ್ವ ತಯಾರಿ ಕುರಿತು ವೀರಕಂಭ ಗ್ರಾಮದ ಟಾಸ್ಕ್ ಫೋರ್ಸ್ ಸಮಿತಿ ಸಭೆ ವೀರಕಂಭ ಗ್ರಾಪಂನಲ್ಲಿ ಬುಧವಾರ ನಡೆಯಿತು.
ಗ್ರಾಪಂ ಆಡಳಿತಾಧಿಕಾರಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ವೀರಕಂಭ ಗ್ರಾಪಂ ವ್ಯಾಪ್ತಿಯಲ್ಲಿ ಕಲ್ಲು ಕೋರೆಗಳ ಹೊಂಡಗಳು, ಕೆರೆಗಳು, ಕಾಲುಸಂಕಗಳ ಕುರಿತಾಗಿ ಮಳೆಗಾಲ ಪೂರ್ವದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮ, ಗ್ರಾಪಂ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ- ಕಸ ಸಂಗ್ರಹಣೆ ಸಮಸ್ಯೆ, ಸವಾಲುಗಳು, ಕಾರ್ಯವಿಧಾನಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಗ್ರಾಪಂ ವ್ಯಾಪ್ತಿಯಲ್ಲಿರುವ ಎರಡು ಜನ ಕ್ಷಯ ರೋಗಿಗಳಿಗೆ ಗ್ರಾಪಂ ವತಿಯಿಂದ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಯಿತು. ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಕ್ರಿಯವಲ್ಲದ ಉದ್ಯೋಗ ಚೀಟಿಗಳ ಪರಿಶೀಲನೆ ಮತ್ತು ರದ್ದುಪಡಿಸುವ ಬಗ್ಗೆ ನಿರ್ಣಯಿಸಲಾಯಿತು.
ವೀರಕಂಭ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ ಶರ್ಮ, ಅಂಗನವಾಡಿ ಮೇಲ್ವಿಚಾರಕಿ ರೂಪಕಲಾ, ಗ್ರಾಮ ಆರೋಗ್ಯ ಸುರಕ್ಷಣಾಧಿಕಾರಿ ಜ್ಯೋತಿ, ಪಂಚಾಯಿತಿ ಕಾರ್ಯದರ್ಶಿ ಸವಿತಾ, ಲೆಕ್ಕ ಸಹಾಯಕ ನವೀನ್ ರಾಬರ್ಟ್, ಪಂಚಾಯಿತಿ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ನೇಹ ಸಂಜೀವಿನಿ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.
ಬಳಿಕ ಕಲ್ಲುಕ್ವಾರಿ ಪ್ರದೇಶ ಹಾಗೂ ವೀರಕಂಭ ಮಜಿ ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆಗೆ ಭೇಟಿ ನೀಡಲಾಯಿತು.