ಉಡುಪಿಯ ಬನ್ನಂಜೆಯಲ್ಲಿ ನಿರ್ಮಾಣಗೊಂಡಿರುವ ಬೃಹತ್ 'ಸಿಗ್ನೇಚರ್' ವಸತಿ-ವಾಣಿಜ್ಯ ಸಮುಚ್ಚಯ.
* ಅತ್ಯಾಧುನಿಕ ಸೌಕರ್ಯದ ವಸತಿ-ವಾಣಿಜ್ಯ ಕಟ್ಟಡ
* ಅಂತಿಮ ಹಂತದಲ್ಲಿ ಅಪಾರ್ಟ್ಮೆಂಟ್ ಕಾಮಗಾರಿ
ಉಡುಪಿ: ನಗರದ ಹೃದಯ ಭಾಗವಾದ ಬನ್ನಂಜೆಯ ಶ್ರೀ ನಾರಾಯಣಗುರು ಮಂದಿರದ ಸಮೀಪದಲ್ಲಿ ಅಸೋಸಿಯೇಟ್ ಬಿಲ್ಡರ್ಸ್ ಆ್ಯಂಡ್ ಕನ್ಸ್ಟ್ರಕ್ಷನ್ಸ್ (ಎಬಿಸಿ) ಸಂಸ್ಥೆಯ 'ಸಿಗ್ನೇಚರ್' ವಸತಿ-ವಾಣಿಜ್ಯ ಸಮುಚ್ಚಯ ಸಜ್ಜುಗೊಳ್ಳುತ್ತಿದೆ. ಕಾಮಗಾರಿ ಅಂತಿಮ ಹಂತ ತಲುಪಿದೆ.
ಎಬಿಸಿ ಸಂಸ್ಥೆಯ ಪ್ರತಿಷ್ಠಿತ ಹಾಗೂ ನೂತನ ಯೋಜನೆಯಾಗಿ 'ಸಿಗ್ನೇಚರ್' ನಿರ್ಮಾಣಗೊಳ್ಳುತ್ತಿದ್ದು, ಅತ್ಯಾಧುನಿಕ ಸೌಲಭ್ಯ ಹೊಂದಿರುವ 1, 2 ಮತ್ತು 3 ಬಿಎಚ್ಕೆ ಅಪಾರ್ಟ್ಮೆಂಟ್ಗಳೂ ಇವೆ. ಈ ವಸತಿ ಹಾಗೂ ವಾಣಿಜ್ಯ ಸಮುಚ್ಚಯದಲ್ಲಿ ಬಹುತೇಕ ಫ್ಲ್ಯಾಟ್ಗಳು ಈಗಾಗಲೇ ಮಾರಾಟ ಆಗಿದ್ದು, ಇನ್ನು ಕೆಲವೇ ಫ್ಲ್ಯಾಟ್ಗಳು ಮಾತ್ರ ಲಭ್ಯವಿವೆ.
ಕಾಲ್ನಡಿಗೆ ದೂರದಲ್ಲಿದೆ ಸಮುಚ್ಚಯ
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ತಾಲೂಕು ಕಚೇರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಕಾಲ್ನಡಿಗೆ ದೂರದಲ್ಲಿ 'ಸಿಗ್ನೇಚರ್' ಸಮುಚ್ಚಯವಿದೆ. ಬಸ್ ನಿಲ್ದಾಣದಿಂದ ಅರ್ಧ ಕಿಮೀ, ಶ್ರೀಕೃಷ್ಣ ಮಠಕ್ಕೆ 1 ಕಿಮೀ, ಅಜ್ಜರಕಾಡು ಪಾರ್ಕ್ಗೆ 1 ಕಿಮೀ, ಉಡುಪಿ ರೈಲ್ವೆ ಸ್ಟೇಷನ್ಗೆ 4 ಕಿಮೀ. ಮಣಿಪಾಲಕ್ಕೆ 5 ಕಿಮೀ, ಮಲ್ಪೆ ಬೀಚ್ಗೆ 4 ಕಿಮೀ ಅಂತರದಲ್ಲಿದೆ.
ಅತ್ಯಾಧುನಿಕ ಸೌಕರ್ಯ:
ಸಮುಚ್ಚಯದಲ್ಲಿ ಈಜುಕೊಳ, ಮೇಲ್ಛಾವಣಿಯಲ್ಲಿ ಜಾಗಿಂಗ್ ಟ್ರ್ಯಾಕ್, ಸುಸಜ್ಜಿತ ಜಿಮ್, ಇವಿ ಚಾರ್ಜಿಂಗ್, ಯೋಗ ಏರಿಯಾ, ಮೇಲ್ಛಾವಣಿ ಮೇಲ್ಬಾಗದಲ್ಲಿ ಲಾಂಜ್ ಸಹಿತ ಹಲವಾರು ಅತ್ಯಾಧುನಿಕ ಸೌಕರ್ಯ ಒಳಗೊಂಡಿದೆ. ಈ ಯೋಜನೆಯು ರೇರಾ ಸಂಸ್ಥೆಯಿಂದ ಅನುಮೋದನೆ ಪಡೆದಿದ್ದು, ಗುಣಮಟ್ಟದ ಸಮುಚ್ಚಯ ನಿರ್ಮಾಣದ ಮೂಲಕ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಬುಕಿಂಗ್ ಮತ್ತು ಮಾಹಿತಿಗೆ ಅಸೋಸಿಯೇಟ್ ಬಿಲ್ಡರ್ಸ್ ಆ್ಯಂಡ್ ಕನ್ಸ್ಟ್ರಕ್ಷನ್ಸ್, ಬನ್ನಂಜೆ ಶ್ರೀ ನಾರಾಯಣಗುರು ಮಂದಿರದ ಸಮೀಪ ಅಥವಾ ವೆಬ್ಸೈಟ್ www.associatebuilders.in ಸಂಪರ್ಕಿಸಲು ಸಂಸ್ಥೆಯ ಪ್ರವರ್ತಕರ ಪ್ರಕಟಣೆ ತಿಳಿಸಿದೆ.
ಗುಣಮಟ್ಟದ ಸೌಕರ್ಯವೇ ವಿಶೇಷತೆ
ಉಡುಪಿಯಲ್ಲಿ ಪ್ರಥಮ ಬಾರಿಗೆ 'ಸಿಗ್ನೇಚರ್'ನ ಇಡೀ ಸಮುಚ್ಚಯ ಗುಣಮಟ್ಟದ ಹಾಗೂ ವಿಶೇಷ ಸೌಕರ್ಯ ಹೊಂದಿದೆ. ಮನೆಯೊಳಗಡೆ ತಂಪು ವಾತಾವರಣಕ್ಕಾಗಿ ಒಳಗೋಡೆ ಹಾಗೂ ಹೊರಗೋಡೆಯನ್ನು ಸಂಪೂರ್ಣವಾಗಿ ಗಟ್ಟಿಮುಟ್ಟಿನ ಕೆಂಪು ಕಲ್ಲಿನಿಂದ ನಿರ್ಮಿಸಲಾಗಿದೆ. ಎಲ್ಲ ಬಾತ್ರೂಮ್ಗಳ ಫಿಟ್ಟಿಂಗ್ಸ್ ಕಾರ್ಯವು ಗ್ರೋಹೆ ಮತ್ತು ಅಮೆರಿಕನ್ ಸ್ಟ್ಯಾಂಡರ್ಡ್ ಕಂಪನಿಯದ್ದಾಗಿದೆ. ಪ್ರತಿಯೊಂದು ಫ್ಲ್ಯಾಟ್ನ ಮುಖ್ಯದ್ವಾರ, ಬೆಡ್ರೂಮ್ ಬಾಗಿಲುಗಳು, ಎಲ್ಲ ಮುಖ್ಯ ಬಾಗಿಲುಗಳು ಮತ್ತು ಇನ್ನಿತರ ಕೋಣೆಯ ಬಾಗಿಲುಗಳನ್ನು ಸಾಗುವಾನಿ ಮರದಿಂದ ಸಿದ್ಧಗೊಳಿಸಲಾಗಿದೆ. ಅಲ್ಲದೆ, ಎಲ್ಲ ನಿರ್ಮಾಣ ಕಾರ್ಯದಲ್ಲಿ ಉತ್ಕಷ್ಟ ಗುಣಮಟ್ಟದ ಸಾಮಗ್ರಿ ಬಳಸಲಾಗಿದೆ.