ಆಶ್ರಯ ಹುಡುಕುತ್ತ ಉಡುಪಿ ಬಸ್​ ನಿಲ್ದಾಣದಲ್ಲಿ ತಂಗಿದ್ದ ಯಲ್ಲಾಪುರದ ಮಹಿಳೆಯನ್ನು ರಸಿದ ವಿಶು ಶೆಟ್ಟಿ ಅಂಬಲಪಾಡಿ ಸಖಿ ಸೆಂಟರ್​ಗೆ ದಾಖಲಿಸಿದರು. 
ಉಡುಪಿ

ಆಶ್ರಯಕ್ಕಾಗಿ ಅಲೆದಾಡುತ್ತಿದ್ದ ಮಹಿಳೆಯ ರಕ್ಷಣೆ

* ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ವೃದ್ಧೆ

ಉಡುಪಿ: ಪತಿ ತೀರಿಕೊಂಡಿದ್ದು ಮಕ್ಕಳಿಲ್ಲದ ಹಿರಿಯ ಮಹಿಳೆಯೋರ್ವರು ಆಶ್ರಯಕ್ಕಾಗಿ ಅಲೆದಾಡುತ್ತ ಸೋಮವಾರ ರಾತ್ರಿ ಉಡುಪಿಗೆ ಬಂದಿದ್ದು, ರಾಜ್​ ಟವರ್​ನ ನವೀನ್​ ಸಹಕಾರದಲ್ಲಿ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ ಸಖಿ ಸೆಂಟರ್​ಗೆ ದಾಖಲಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಹಾದೇವಿ ಗೌಡ (62) ರಕ್ಷಿಸಲ್ಪಟ್ಟ ಮಹಿಳೆ.

ಆಶ್ರಯ ಹುಡುಕುತ್ತ ಉಡುಪಿ ಬಸ್​ ನಿಲ್ದಾಣದಲ್ಲಿ ತಂಗಿದ್ದ ಯಲ್ಲಾಪುರದ ಮಹಿಳೆಯನ್ನು ರಸಿದ ವಿಶು ಶೆಟ್ಟಿ ಅಂಬಲಪಾಡಿ ಸಖಿ ಸೆಂಟರ್​ಗೆ ದಾಖಲಿಸಿದರು.

ಜೀವನದಲ್ಲಿ ಎದುರಾದ ಅಸಹಾಯಕತೆ ಹಾಗೂ ಒಂಟಿತನದಿಂದ ಅಲೆಯುವಂತಾಗಿದೆ. ಬದುಕಲಾಗುತ್ತಿಲ್ಲ ಎಂದು ತಿಳಿಸಿರುವ ನೊಂದ ಮಹಿಳೆ, ಯಲ್ಲಾಪುರದಲ್ಲಿ ಧನಿಕರೊಬ್ಬರ ಮನೆಯಲ್ಲಿ 40 ವರ್ಷದಿಂದ ಕೆಲಸ ಮಾಡಿಕೊಂಡಿದ್ದೆ. ಇದೀಗ ವೃದ್ಧಾಪ್ಯ ಹಾಗೂ ಅನಾರೋಗ್ಯದಿಂದ ಕೆಲಸ ಮಾಡಲು ಶಕ್ತಿ ಇಲ್ಲದಾಗಿದೆ. ಬದುಕಿರುವವರೆಗೆ ಎಲ್ಲಿಯಾದರೂ ನೆಲೆ ನೀಡಿ ಎಂದು ಬೇಡಿಕೊಂಡಿದ್ದಳು.

ಸಂಬಂಧಿಕರು ಇದ್ದಲ್ಲಿ ಉಡುಪಿಯ ಸಖಿ ಸೆಂಟರ್​ ಸಂಪರ್ಕಿಸಬಹುದು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.