ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕರ್ನಾಟಕ ಏಕೀಕರಣ ಬಳಿಕ ಈವರೆಗೆ ಸಂಸ್ಕೃತಿ, ಸಾಹಿತ್ಯ, ಶಿಕ್ಷಣ, ವಿಜ್ಞಾನ, ಲಲಿತಕಲೆ ಜಾನಪದ, ಕೃಷಿ, ನೀರಾವರಿ, ಪ್ರವಾಸೋದ್ಯಮ, ತಂತ್ರಜ್ಞಾನ ಸೇರಿ ಹಲವಾರು ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಈ ನೆಲದ ಜಲ, ಭಾಷೆ, ನಾಡು ನುಡಿ, ಸಂಸ್ಕೃತಿ ಕಾಪಾಡಿ ವಿಶ್ವದೆಲ್ಲೆಡೆ ಕನ್ನಡ ಕಂಪನ್ನು ಬೀರೋಣ ಹಾಗೂ ಎಲ್ಲ ರಂಗಗಳಲ್ಲಿ ಕನ್ನಡಿಗರೆಲ್ಲರೂ ಮೊದಲಿಗರಾಗೋಣ ಎಂದು ತಹಸೀಲ್ದಾರ್ ಅನಂತಶಂಕರ ಬಿ. ಹೇಳಿದರು.
ಕಾಪು ತಾಲೂಕು ಆಡಳಿತ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಾಪುವಿನಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ನೀಲಾನಂದ ನಾಯ್ಕ ದಿಕ್ಸೂಚಿ ಭಾಷಣ ಮಾಡಿದರು. ಪೊಲೀಸ್, ಎನ್ಸಿಸಿ, ಸ್ಕೌಟ್ಸ್, ಸೇವಾದಳ ತಂಡಗಳು ಧ್ವಜವಂದನೆಯಲ್ಲಿ ಭಾಗವಹಿಸಿದ್ದವು. ಸಾಧಕ ವಿದ್ಯಾರ್ಥಿಗಳಾದ ಧನುಶ್ರೀ, ತ್ರಿಷಾ, ಪೂರ್ವಿ, ಸಾನ್ವಿ ಜೆ.ಆಚಾರ್ಯ ಹಾಗೂ ನಿವೃತ್ತ ಗ್ರಾಮ ಸಹಾಯಕ ಸ್ಟಾೃನಿ ಅವರನ್ನು ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ, ಕಾಪು ಪುರಸಭೆ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಉಪಾಧ್ಯಕ್ಷೆ ಸರಿತಾ ಶಿವಾನಂದ, ಸ್ಥಾಯೀ ಸಮಿತಿ ಅಧ್ಯಕ್ಷ ಕಿರಣ್ ಆಳ್ವ, ಮುಖ್ಯಾಧಿಕಾರಿ ಎನ್.ಎಂ.ಮೇಸ್ತ, ಸದಸ್ಯರಾದ ಶೈಲೇಶ್ ಅಮೀನ್, ಉಮೇಶ್ ಕರ್ಕೇರ, ರಾಧಿಕಾ, ಶೋಭಾ ಬಂಗೇರ, ವಿದ್ಯಾಲತಾ ಸುವರ್ಣ, ಸರಿತಾ, ನೂರುದ್ದೀನ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಶ್ವಿನಿ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜು ಉಪಸ್ಥಿತರಿದ್ದರು. ತಾಪಂ ಕಾರ್ಯ ನಿರ್ವಹಣಾಧಿಕಾರಿ ವಿಜಯಕುಮಾರ್ ಸ್ವಾಗತಿಸಿದರು. ಶಿವಣ್ಣ ಬಾಯರ್ ನಿರೂಪಿಸಿದರು.
ಪ್ರತೀ ವರ್ಷ ನೆಲ, ಜಲ, ನಾಡು ನುಡಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕರ ಜೈನರುದ್ಯಾನ ಎನ್ನುವ ಪರಿಕಲ್ಪನೆ ನಮ್ಮದಾಗಿದ್ದು, ಸಮೃದ್ಧ, ಸಾಮರಸ್ಯದ ನಾಡನ್ನು ಕಟ್ಟುವ ಚಿಂತನೆಗೆ ನಾವೆಲ್ಲರೂ ಕೈಜೋಡಿಸಬೇಕು.ಗುರ್ಮೆ ಸುರೇಶ್ ಶೆಟ್ಟಿ ಶಾಸಕ