‘ಆಟಿದ ಐಸಿರೊ’ ಸಭಾ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ವಿದ್ಯಾವಾಚಸ್ಪತಿ ಡಾ.ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಉದ್ಘಾಟಿಸಿದರು. ಬಂಟರ ಸಂಘ ವಲಯಾಧ್ಯಕ್ಷ ರವೀಂದ್ರ ರೈ ಕಲ್ಲಿಮಾರ್, ಮುಂಬಯಿಯ ವಿಶ್ವಾತ್ ಕೆಮಿಕಲ್ಸ್ ಅಧ್ಯಕ್ಷ ಬಿ.ವಿವೇಕ್ ಶೆಟ್ಟಿ ಬೊಲ್ಯಗುತ್ತು, ಉಪನ್ಯಾಸಕಿ ಚಿತ್ರಾ ಪಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕರಾವಳಿಯಲ್ಲಿ ಧಾರ್ಮಿಕ, ಸಂಸ್ಕೃತಿ ಎತ್ತಿಹಿಡಿಯುವ ಮೂಲಕ ಬಂಟ ಸಮಾಜ ಬೆಳೆದಿದೆ. ಮಕ್ಕಳನ್ನು ಧಾರ್ಮಿಕ, ಸಾಂಸ್ಕೃತಿಕವಾಗಿ ಬಂಧಿಸಿಟ್ಟರೆ ಮಾತ್ರ ಬಂಟ ಸಮಾಜ ಉಳಿಯುತ್ತದೆ ಎಂದು ಉಡುಪಿ ಶ್ರೀ ಬಾರ್ಕೂರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಡಾ.ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಉಳ್ಳಾಲ ವಲಯ ಬಂಟರ ಸಂಘದ ನೇತೃತ್ವದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಬೆಂಗಳೂರು ಬಂಟರ ಸಂಘದ ಸಹಯೋಗದಲ್ಲಿ ವಲಯದ 14 ಗ್ರಾಮಗಳ ಸಮಾಜದವರಿಂದ ಭಾನುವಾರ ಅಸೈಗೋಳಿ ಬಂಟರ ಭವನದಲ್ಲಿ ‘ಆಟಿದ ಐಸಿರೊ’, ವಿದ್ಯಾರ್ಥಿವೇತನ ವಿತರಣಾ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಂಬೈಯ ವಿಶ್ವಾತ್ ಕೆಮಿಕಲ್ಸ್ ಅಧ್ಯಕ್ಷ ಬಿ.ವಿವೇಕ್ ಶೆಟ್ಟಿ ಬೊಲ್ಯಗುತ್ತು ಮಾತನಾಡಿದರು. ಯುವ ವಿಭಾಗದ ಲಾಂಛನ ಬಿಡುಗಡೆ, 70 ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಬಂಟರ ಸಂಘ ವಲಯಾಧ್ಯಕ್ಷ ರವೀಂದ್ರ ರೈ ಕಲ್ಲಿಮಾರ್ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕಿ ಚಿತ್ರಾ ಪಿ.ಶೆಟ್ಟಿ, ಮೂಡುಬಿದಿರೆ ಬಂಟರ ಸಂಘ ಅಧ್ಯಕ್ಷೆ ಶೋಭಾ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಜತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಪುಂಚಮೆ, ಬೆಂಗಳೂರು ಬಂಟರ ಸಂಘ ಗೌರವ ಕಾರ್ಯದರ್ಶಿ ವಿಜಯ ಶೆಟ್ಟಿ ಹಾಲಾಡಿ, ಮಂಗಳೂರು ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ೇರ್ ಟ್ರಸ್ಟ್ ಸಂಚಾಲಕ ರಾಜಗೋಪಾಲ ರೈ, ಮಾಜಿ ಅಧ್ಯಕ್ಷರಾದ ಎಸ್.ಜಯರಾಮ ಸಾಂತ ಬೋಳ್ಯಾರುಗುತ್ತು, ಚಂದ್ರಹಾಸ ಅಡ್ಯಂತಾಯ ಕುತ್ತಾರುಗುತ್ತು, ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಸುರೇಶ್ ಚೌಟ ಕಕ್ಕೆಮಜಲು ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷೆ ಮಲ್ಲಿಕಾ ಎಸ್.ಭಂಡಾರಿ ವಂದಿಸಿದರು. ನಿಶಾಂತ್ ಶೆಟ್ಟಿ, ಚಿತ್ರಾ ಜಿ.ಅಡ್ಯಂತಾಯ ನಿರೂಪಿಸಿದರು.