ಶಿವಪುರ ಪಾಂಡುಕಲ್ಲು ಗುರುಪದಕ್ಕೆ ಶ್ರೀ ಈಶ ವಿಠಲದಾಸ ಸ್ವಾಮೀಜಿ ಶುಕ್ರವಾರ ಭೇಟಿ ನೀಡಿ ಹರಿದಾಸ ಬಿ.ಸಿ.ರಾವ್​ ಶಿವಪುರ ಅವರನ್ನು ಗೌರವಿಸಿದರು. ಅಹಲ್ಯ ಸಿ.ರಾವ್​ ಮೊದಲಾದವರು ಉಪಸ್ಥಿತರಿದ್ದರು. 
ಉಡುಪಿ

ಹರಿಕಥೆಯಿಂದ ಧಾರ್ಮಿಕ ಪ್ರಜ್ಞೆ

Vinod Kumar

ಪ್ರಮುಖ ಮುಖ್ಯಾಂಶಗಳು

  • ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ
ಹೆಬ್ರಿ: ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯ ಎನ್ನುವ ಉದ್ದೇಶದಿಂದ 40 ವರ್ಷಗಳಿಂದ ಸಾವಿರಕ್ಕೂ ಮಿಕ್ಕಿ ಹರಿಕಥಾ ಕಾರ್ಯಕ್ರಮದ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿದ ಹರಿದಾಸ ಬಿ.ಸಿ.ರಾವ್​ ಅವರ ಭಕ್ತಿ ಮಾರ್ಗದ ಪ್ರಸಾರ ಶ್ಲಾಘನೀಯ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಶಿವಪುರ ಪಾಂಡುಕಲ್ಲು ಗುರುಪದಕ್ಕೆ ಶುಕ್ರವಾರ ಭೇಟಿ ನೀಡಿ ರಾಜ್ಯೋತ್ಸವ ಪ್ರಶಸ್ತಿ ಪುರಸತ ಹರಿದಾಸ ಬಿ.ಸಿ.ರಾವ್​ ಶಿವಪುರ ಅವರನ್ನು ಗೌರವಿಸಿ ಆಶೀರ್ವಚನ ನೀಡಿದರು.
ಬಿ.ಸಿ.ರಾವ್​ ಶಿವಪುರ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು. ಅಹಲ್ಯ ಸಿ.ರಾವ್​ ಮೊದಲಾದವರು ಉಪಸ್ಥಿತರಿದ್ದರು. ಡಾ.ರಾಘವೇಂದ್ರ ಬಡ್ಕಿಲ್ಲಾಯ ನಿರೂಪಿಸಿದರು.