ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಏಕಾಹ ಭಜನೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಮುಖರಾದ ಚಂದ್ರಶೇಖರ ಕರ್ಕೇರ, ಜಂಬುರಾಜ್ ಮಹಾಜನ್, ಜಯಂತ ಕುತ್ಯಾಡಿ ಸಂಕೇಶ ಮೊದಲಾದವರಿದ್ದರು. 
ಉಡುಪಿ

ಧಾರ್ಮಿಕ ಪ್ರಜ್ಞೆಯಿಂದ ಮನುಷ್ಯ ಜೀವನಕ್ಕೆ ಅರ್ಥ

ವಿಜಯವಾಣಿ ಸುದ್ದಿಜಾಲ ಕಡಬ
ಸಂಸ್ಕಾರಯುತ ಧಾರ್ಮಿಕ ಪ್ರಜ್ಞೆಯಿಂದ ಮನುಷ್ಯ ಜೀವನಕ್ಕೆ ಅರ್ಥ ಬರಲು ಸಾಧ್ಯ. ಸಂಸ್ಕಾರ ಎನ್ನುವ ಬೇಲಿಯೊಳಗೆ ನಾವು ಬದುಕನ್ನು ರೂಪಿಸಿಕೊಳ್ಳಬೇಕು. ದೇವರ ಮೇಲಿನ ಭಯ ಮತ್ತು ಭಕ್ತಿ ನಮ್ಮನ್ನು ಬದುಕಿನಲ್ಲಿ ತಪ್ಪು ದಾರಿ ತುಳಿಯದಂತೆ ನಿಯಂತ್ರಿಸುತ್ತದೆ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 65ನೇ ವರ್ಷದ ಏಕಾಹ ಭಜನೋತ್ಸವ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭೆೆಯಲ್ಲಿ ಆಶೀರ್ವಚನ ನೀಡಿದರು.
ಭಜನಾ ಮಂಡಳಿ ಸಕ್ರಿಯ ಪದಾಧಿಕಾರಿಯಾಗಿದ್ದ ದಿ.ಕೆ.ನಾರಾಯಣ ಭಂಡಾರಿ ಸ್ಮರಣಾರ್ಥ 7 ಲಕ್ಷ ರೂ. ವೆಚ್ಚದಲ್ಲಿ ದೇಗುಲದ ಪಾಕಶಾಲೆಯ ಪುನಃ ನಿರ್ಮಾಣ ಹಾಗೂ ಸುಸಜ್ಜಿತ ಕೈತೊಳೆಯುವ ವ್ಯವಸ್ಥೆ ಕೊಡುಗೆ ನೀಡಿದ ದಾನಿ ಮಂಗಳೂರಿನ ಉದ್ಯಮಿ ಪ್ರಸಾದ್ ಎನ್.ಕೆ.ಕಡಬ ದಂಪತಿಯನ್ನು, ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿದ ಕಿಶನ್ ಕುಮಾರ್ ರೈ ಪೆರಿಯಡ್ಕ ಅವರನ್ನು ಸ್ವಾಮೀಜಿ ಗೌರವಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಕರ್ಕೇರ, ಏಕಾಹ ಭಜನೋತ್ಸವ ಸಮಿತಿ ಗೌರವಾಧ್ಯಕ್ಷ ಜಂಬುರಾಜ್ ಮಹಾಜನ್, ಕಾರ್ಯದರ್ಶಿ ಜಯಂತ ಕುತ್ಯಾಡಿ ಸಂಕೇಶ, ಭಜನಾ ಮಂಡಳಿ ಕಾರ್ಯದರ್ಶಿ ಮನೋಹರ ರೈ ಬೆದ್ರಾಜೆ ಉಪಸ್ಥಿತರಿದ್ದರು.
ದಯಾನಂದ ಗೌಡ ಆರಿಗ ಸ್ವಾಗತಿಸಿದರು. ಪತ್ರಕರ್ತ ನಾಗರಾಜ್ ಎನ್.ಕೆ. ನಿರೂಪಿಸಿದರು. ಸೋಮಪ್ಪ ನಾಕ್ ವಂದಿಸಿದರು.