ಕೋಟೇಶ್ವರದ 'ಸ್ನಿಗ್ಧಶ್ರೀ' ಸಂಪಾದಕ ಡಾ. ಎನ್​. ಭಾಸ್ಕರ ಆಚಾರ್ಯ ಕೃತಿ ಬಿಡುಗಡೆಗೊಳಿಸಿದರು.  
ಉಡುಪಿ

ಕಾ ಪುರುಷ್​ ಓ ಮಹಾಪುರುಷ್​ ಕೃತಿ ಬಿಡುಗಡೆ

ಉಡುಪಿ: ಯುವ ಜನತೆಯಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ದೀರ್ ಲೇಖನಕ್ಕಿಂತ ಚುಟುಕು ಬರಹಗಳು ಹೆಚ್ಚು ಜನಪ್ರಿಯವಾಗುತ್ತಿವೆ ಎಂದು ಕೋಟೇಶ್ವರದ 'ಸ್ನಿಗ್ಧಶ್ರೀ' ಸಂಪಾದಕ ಡಾ. ಎನ್​. ಭಾಸ್ಕರ ಆಚಾರ್ಯ ಹೇಳಿದರು.

ಮಂಗಳೂರು ಕಲ್ಕೂರ ಪ್ರತಿಷ್ಠಾನ ಹಾಗೂ ಇಂಪೂ-ಗುಂಪು ಬಳಗ ಆಶ್ರಯದಲ್ಲಿ ಸಾಹಿತಿ ಎಚ್​. ಶಾಂತರಾಜ ಐತಾಳ್​ ರಚಿಸಿದ ಕಾ ಪುರುಷ್​ ಓ ಮಹಾಪುರುಷ್​ ಕೃತಿಯ ಬಿಡುಗಡೆಗೊಳಿಸಿ ಮಾತನಾಡಿದರು.

ಸಾಹಿತ್ಯ ಕ್ಷೇತ್ರದಲ್ಲಿ ಇದೊಂದು ವಿಶಿಷ್ಟ ಕೃತಿಯಾಗಿದ್ದು, ಗ್ರಂಥಕರ್ತರ ಸಾಹಿತ್ಯಿಕ ಶ್ರಮ ಶ್ಲಾನೀಯ ಎಂದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್​. ಪ್ರದಿಪ ಕುಮಾರ್​ ಕಲ್ಕೂರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಡಾ. ಕೆ. ಅಶೋಕ ಕಾಮತ್​, ಉದ್ಯಮಿ ರಮೇಶ್​ ರಾವ್​ ಬೀಡು, ಡಾ. ಎಂ. ಆರ್​. ಅಡಿಗ ಕುಂದಾಪುರ, ಎಚ್​. ಪಿ. ರವಿರಾಜ್​, ನವನೀತ ಶೆಟ್ಟಿ ಕದ್ರಿ ಮೊದಲಾದವರು ಉಪಸ್ಥಿತರಿದ್ದರು. ಸಾಹಿತಿ ಎಚ್​. ಶಾಂತರಾಜ ಐತಾಳ್​ ಸ್ವಾಗತಿಸಿದರು.