ನಂದಿಕೇಶ್ವರ ದೈವಸ್ಥಾನದ ಕೆರೆ ಅಭಿವೃದ್ಧಿಗಾಗಿ ಶುಕ್ರವಾರ ಚಾಲನೆ ನೀಡಲಾಯಿತು. ಪ್ರಮುಖರಾದ ಪ್ರಕಾಶ್ ಶೆಟ್ಟಿ, ಡಾ.ಕೃಷ್ಣ ಕಾಂಚನ್, ತಿಮ್ಮ ಪೂಜಾರಿ, ಶರತ್ ಕುವಾರ್ ಶೆಟ್ಟಿ ಮೊದಲಾದವರಿದ್ದರು. 
ಉಡುಪಿ

ಮಣೂರು ಒಡಗಿನ ನಂದಿಕೇಶ್ವರ ಕೆರೆಗೆ ಕಾಯಕಲ್ಪ

ಕೋಟ: ನಮ್ಮೂರು ನಮ್ಮ ಕೆರೆ ಶ್ರೀಕ್ಷೇತ್ರ ಧರ್ಮಸ್ಥಳದ ಖಾವಂದರ ಕನಸಿನ ಯೋಜನೆಯಾಗಿದ್ದು, ಹತ್ತು ವರ್ಷಗಳಿಂದ ರಾಜ್ಯಾದ್ಯಂತ ಬರಗಾಲದ ಸನ್ನಿವೇಶ, ನೀರಿನ ಮಹತ್ವಗಳನ್ನರಿತು ಜಾರಿಗೊಳಿಸಿದ್ದಾರೆ. ಈಗಾಗಲೇ 980ಕ್ಕೂ ಅಧಿಕ ಕೆರೆಗಳಿಗೆ ಜೀವ ತುಂಬಲಾಗಿದೆ. ಕೆರೆಗಳನ್ನು ಸಂರಕ್ಷಿಸುವಂತೆ ಕರೆ ನೀಡಿ ನಂದಿಕೇಶ್ವರ ಕೆರೆಗೆ ಗ್ರಾಮಸ್ಥರ ಸಹಕಾರದೊಂದಿಗೆ ಮರುಜೀವ ನೀಡಲಿದ್ದೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಕೋಟ ಗ್ರಾಪಂ, ಕೆರೆ ಅಭಿವೃದ್ಧಿ ಸಮಿತಿ ಸಹಭಾಗಿತ್ವದಡಿ ಮಣೂರು ದೇವಸ ಒಡಗಿನ ನಂದಿಕೇಶ್ವರ ದೈವಸ್ಥಾನದ ಕೆರೆ ಅಭಿವೃದ್ಧಿಗಾಗಿ ನಮ್ಮೂರು ನಮ್ಮ ಕೆರೆ ಯೋಜನೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಕೋಟ ಸಿಎ ಬ್ಯಾಂಕ್ ನಿರ್ದೇಶಕ ಮಹೇಶ್ ಶೆಟ್ಟಿ ಮಾತನಾಡಿದರು. ದೈವಸ್ಥಾನದ ಪಾತ್ರಿ ಪ್ರಕಾಶ್ ಶೆಟ್ಟಿ, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ನಿರ್ದೇಶಕ ತಿಮ್ಮ ಪೂಜಾರಿ, ಬ್ಯಾಂಕ್‌ನ ಸಿಇಒ ಶರತ್ ಕುವಾರ್ ಶೆಟ್ಟಿ, ಕೆರೆ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ, ಉಪಾಧ್ಯಕ್ಷ ಸರ್ವೋತ್ತಮ ಹೆಬ್ಬಾರ್, ಗ್ರಾವಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ರಮೇಶ್ ಪಿ.ಕೆ., ಕೋಟ ಗ್ರಾಪಂ ಕಾರ್ಯದರ್ಶಿ ಜಲಜಾಕ್ಷಿ, ಗ್ರಾವಾಭಿವೃದ್ಧಿ ಯೋಜನೆ ಮಣೂರು ಒಕ್ಕೂಟ ಅಧ್ಯಕ್ಷ ದಿನೇಶ್ ಆಚಾರ್, ಕಸಾಪ ಜಿಲ್ಲಾಧ್ಯಕ್ಷ ನಿಲಾವರ ಸುರೇಂದ್ರ ಅಡಿಗ, ತಾಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು. ಕೋಟ ವಲಯ ಮೇಲ್ವಿಚಾರಕ ನಾಗೇಶ್ ಸ್ವಾಗತಿಸಿದರು. ಯೋಜನೆಯ ತಾಲೂಕಿನ ಕೃಷಿ ಅಧಿಕಾರಿ ರಾವೇಂದ್ರ ನಿರೂಪಿಸಿದರು.