ಹಸನ್ ಉಳುವಾರು 
ಉಡುಪಿ

ಫುಟ್‌ಬಾಲ್ ಪಂದ್ಯ ವೇಳೆ ರೆಫರಿ ಮೃತ್ಯು

ಇಂದಿರಾ ಎನ್ ಕೆ
 ಕಾಸರಗೋಡು: ಫುಟ್‌ಬಾಲ್ ಪಂದ್ಯಾಟದಲ್ಲಿ ರೆಫರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ  ಹಸನ್ ಉಳುವಾರು(46) ಕುಸಿದು ಬಿದ್ದು ಮೃತಪಟ್ಟ ಘಟನೆ ಕುಂಬಳೆ ಉಳುವಾರಿನಲ್ಲಿ ನಡೆದಿದೆ. 
ಕುಂಬಳೆ, ಉಳುವಾರು ಬದ್ರಿಯಾ ಮನ್ಸಿಲ್‌ನ ಅಬ್ದುಲ್ಲಾ ಮತ್ತು ಖದೀಜಾ ಎಂಬುವರ ಪುತ್ರ. ಬುಧವಾರ ಫುಟ್‌ಬಾಲ್ ಪಂದ್ಯದಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವರಿಗೆ ತಲೆಸುತ್ತು ಬಂದಂತಾಗಿ ಕುಸಿದು ಬಿದ್ದಿದ್ದರು. ತಕ್ಷಣ ಸ್ಥಳದಲ್ಲಿದ್ದವರು ಕುಂಬಳೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಪ್ರಯೋಜನವಾಗಿರಲಿಲ್ಲ. ಮುಸ್ಲಿಂ ಲೀಗ್ ಸಕ್ರಿಯ ಕಾರ್ಯಕರ್ತರಾಗಿದ್ದರು.