ಉಡುಪಿಯಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರವನ್ನು ಬಸ್ರೂರು ರಾಜೀವ್​ ಶೆಟ್ಟಿ ಉದ್ಘಾಟಿಸಿದರು. ಡಾ. ಅಶೋಕ್​ ಕುಮಾರ್​ ವೈ.ಜಿ., ಡಾ. ಅಭಿನಯ್​, ಮುರಳೀಧರ್​ ಭಟ್​, ಪುರುಷೋತ್ತಮ ನಾಯಕ್​, ರಾಮಚಂದ್ರ ಪಾಟ್ಕರ್​, ಜೀವನ್​ ಶೆಟ್ಟಿ, ವಿಠ್ಠಲ್​ ಕಾಂಚನ್​, ಡಾ. ಗಣನಾಥ್​ ಶೆಟ್ಟಿ ಎಕ್ಕಾರು ಇದ್ದರು. 
ಉಡುಪಿ

ಆಧುನಿಕ ಸೌಲಭ್ಯಗಳಿಂದ ಆನಾರೋಗ್ಯ ಹೆಚ್ಚಳ

* ಬಸ್ರೂರು ರಾಜೀವ್​ ಶೆಟ್ಟಿ ಅನಿಸಿಕೆ

* ಆರೋಗ್ಯ ತಪಾಸಣೆ, ಮಾಹಿತಿ ಶಿಬಿರ

ಉಡುಪಿ: ಮನುಷ್ಯನಿಗೆ ಇಂದು ಸಾಕಷ್ಟು ಪ್ರಮಾಣದಲ್ಲಿ ಆಧುನಿಕ ಸವಲತ್ತು ಲಭ್ಯ ಇರುವುದರಿಂದ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಎಲ್ಲರೂ ಸಹ ದೇಹದ ಅಂಗಾಂಗಗಳ ರಚನೆ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ತಿಳಿದುಕೊಳ್ಳುವುದು ಅತಿಮುಖ್ಯ. ಆ ನಿಟ್ಟಿನಲ್ಲಿ ಆರೋಗ್ಯ ಮಾಹಿತಿ ಶಿಬಿರಗಳು ಮಹತ್ವದ್ದಾಗಿದೆ ಎಂದು ಭಾರತೀಯ ರೆಡ್​ ಕ್ರಾಸ್​ ಸಂಸ್ಥೆಯ ರಾಜ್ಯ ಸಭಾಪತಿ ಬಸ್ರೂರು ರಾಜೀವ್​ ಶೆಟ್ಟಿ ಹೇಳಿದರು.
ಉಡುಪಿಯ ಕುಂಜಿಬೆಟ್ಟಿನಲ್ಲಿರುವ ಓಕುಡೆ ಡಯಾಗ್ನೋಸ್ಟಿಕ್​ ಸೆಂಟರ್​ನಲ್ಲಿ ಭಾರತೀಯ ರೆಡ್​ ಕ್ರಾಸ್​ ಸಂಸ್ಥೆ ಉಡುಪಿ, ಲಯನ್ಸ್​ ಕ್ಲಬ್​ ಉಡುಪಿ ಮಿಡ್​ಟೌನ್​ ವತಿಯಿಂದ ಆಯೋಜಿಸಿದ್ದ ಫ್ಯಾಟಿ ಲಿವರ್​, ಕಣ್ಣು ತಪಾಸಣೆ ಮತ್ತು ಉಚಿತ ಮಾಹಿತಿ ಶಿಬಿರ ಉದ್ಘಾಟಿಸಿ ಮಾತಾನಾಡಿದರು.
ಜಿಲ್ಲಾ ರೆಡ್​ ಕ್ರಾಸ್​ ಸಭಾಪತಿ ಡಾ. ಅಶೋಕ್​ ಕುಮಾರ್​ ವೈ.ಜಿ. ಫ್ಯಾಟಿ ಲಿವರ್​ ಸಮಸ್ಯೆಯ ವಿಚಾರ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಅಭಿನಯ್​ ಅವರು ಕಣ್ಣಿನ ಆರೋಗ್ಯದ ಕುರಿತು ಮಾಹಿತಿ ನೀಡಿದರು. ಕೃಷಿತಜ್ಞ ಮುರಳೀಧರ್​ ಭಟ್​ ಅವರು ಆರೋಗ್ಯ ಮತ್ತು ಪ್ರಕೃತಿಗೆ ಇರುವ ಸಂಬಂಧ ವಿವರಿಸಿದರು.
ಲಯನ್ಸ್​ ಕ್ಲಬ್​ ಉಡುಪಿ ಮಿಡ್​ಟೌನ್​ನ ಅಧ್ಯಕ್ಷ ಪುರುಷೋತ್ತಮ ನಾಯಕ್​, ನಿಯೋಜಿತ ಅಧ್ಯಕ್ಷ ರಾಮಚಂದ್ರ ಪಾಟ್ಕರ್​, ಕಾರ್ಯದರ್ಶಿ ಜೀವನ್​ ಶೆಟ್ಟಿ, ವಿಠ್ಠಲ್​ ಕಾಂಚನ್​ ಉಪಸ್ಥಿತರಿದ್ದರು.
ರೆಡ್​ ಕ್ರಾಸ್​ನ ಜಿಲ್ಲಾ ಕಾರ್ಯದರ್ಶಿ ಡಾ. ಗಣನಾಥ್​ ಶೆಟ್ಟಿ ಎಕ್ಕಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್​ ಜಿಲ್ಲಾ ಖಜಾಂಚಿ ಸುಬ್ರಹ್ಮಣ್ಯ ಶೇರಿಗಾರ್​ ವಂದಿಸಿದರು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಫಲಾನುಭವಿಗಳು ಪಾಲ್ಗೊಂಡಿದ್ದರು.