ಮೂಡುಬಿದಿರೆ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ಸ್ವಾಮೀಜಿ ಜ್ಞಾನ ಭಾರತ್ ಮಿಷನ್‌ನ ಪ್ರತಿ ಅನಾವರಣಗೊಳಿಸಿದರು. ಪ್ರಮುಖರಾದ ಡಾ.ಜಿ.ವಿ.ಕಲ್ಲಾಪುರ, ಸದಸ್ಯರಾದ ಡಾ.ಕೆ.ಎಸ್.ಎನ್.ಉಡುಪ, ಡಾ.ವೆಂಕಟೇಶ ಮಂಜುಳಗಿರಿ, ಶ್ರವಣ ಎ. ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ: ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಭಾರತೀಯ ಪ್ರಾಚೀನ ಹಸ್ತಪ್ರತಿಗಳ ಸರ್ವೇಕ್ಷಣೆ ಮತ್ತು ಸಂರಕ್ಷಣೆಗಾಗಿ ಜ್ಞಾನ ಭಾರತ್ ಮಿಷನ್ ಸಂಸ್ಥೆಯನ್ನು ಪ್ರಾರಂಭಿಸಿ ಕರ್ನಾಟಕದ ಕ್ಲಸ್ಟರ್ ಕೇಂದ್ರವಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವನ್ನು ನೇಮಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸಂಚಾಲಕರನ್ನಾಗಿ ಕುಕ್ಕೆ ಸುಬ್ರಹ್ಮಣ್ಯದ ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಜಿ.ವಿ.ಕಲ್ಲಾಪುರ ಅವರನ್ನು ನೇಮಿಸಲಾಗಿದೆ. ಸದಸ್ಯರಾಗಿ ಡಾ.ಕೆ.ಎಸ್.ಎನ್.ಉಡುಪ, ಡಾ.ವೆಂಕಟೇಶ ಮಂಜುಳಗಿರಿ, ಶ್ರವಣ ಎ. ಅವರನ್ನು ಆಯ್ಕೆ ಮಾಡಲಾಗಿದೆ.
ಜೈನ ಮಠಕ್ಕೆ ಭೇಟಿ
ಮೂಡುಬಿದಿರೆಯ ಜೈನ ಮಠಕ್ಕೆ ಜಿಲ್ಲಾ ಸಂಚಾಲಕ ಡಾ.ಜಿ.ವಿ.ಕಲ್ಲಾಪುರ, ಸದಸ್ಯರಾದ ಡಾ.ಕೆ.ಎಸ್.ಎನ್.ಉಡುಪ, ಡಾ.ವೆಂಕಟೇಶ ಮಂಜುಳಗಿರಿ, ಶ್ರವಣ ಎ. ಹೋಗಿ ಸ್ವಾಮೀಜಿ ಅವರನ್ನು ಭೇಟಿಮಾಡಿ ಅಲ್ಲಿನ ಹಸ್ತಪ್ರತಿ ವೀಕ್ಷಿಸಿದರು. ಮಠದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ಸ್ವಾಮೀಜಿ ತಮ್ಮ ಸಂಗ್ರಹದಲ್ಲಿನ ಸಂಸ್ಥೆಯ ಹಸ್ತಪ್ರತಿಗಳನ್ನು ತೋರಿಸಿ ವಿವರಿಸಿದರು. ಸ್ವಾಮೀಜಿಗಳು ಜ್ಞಾನ ಭಾರತ್ ಮಿಷನ್‌ನ ಪ್ರತಿ ಅನಾವರಣಗೊಳಿಸಿದರು.
ಹಸ್ತಪ್ರತಿಗಳನ್ನು ಅವುಗಳ ವಾರಿಸುದಾರರ ಸ್ಥಳದಲ್ಲೇ ಸರ್ಕಾರದ ವೆಚ್ಚದಲ್ಲಿ ಸಂರಕ್ಷಿಸಿ, ಡಿಜಿಟಲ್ ಪ್ರತಿ ತಯಾರಿಸಲಾಗುವುದು. ತಮ್ಮ ಸಂಸ್ಥೆಗಳಲ್ಲಿ, ಮನೆಗಳಲ್ಲಿ ಇರುವ ಹಸ್ತಪ್ರತಿಗಳ ಮಾಹಿತಿಯನ್ನು ಜಿಲ್ಲಾ ಸಂಚಾಲಕರಿಗೆ(9480544024) ತಿಳಿಸಲು ಕೋರಲಾಗಿದೆ.