ಎಸ್ಎಸ್ಎಲ್ಸಿಯಲ್ಲಿ ಸಾಧನೆ ಮಾಡಿದ ತೊಂಬಟ್ಟು ಪ್ರೀತಮ್ ಜಿ.ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಶಂಕರ ಐತಾಳ, ಸತ್ಯನಾರಾಯಣ ಉಡುಪ, ಮುಸ್ತಾಕ್ ಅಹಮ್ಮದ್, ಶ್ರೀರಾಮ ಅಡಿಗ, ಕೆ.ಸಂಜೀವ ಆರ್ಡಿ ಮತ್ತಿತರರು ಉಪಸ್ಥಿತರಿದ್ದರು.
- ಶಂಕರ ಐತಾಳ ಅಮಾಸೆಬೈಲು ಅಭಿಮತ
ವಿಜಯವಾಣಿ ಸುದ್ದಿಜಾಲ ಅಮಾಸೆಬೈಲು
ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆಯೊಂದಿಗೆ ಕೀರ್ತಿ ಗಳಿಸಿದವರನ್ನು ಸನ್ಮಾನಿಸುವುದು ಶ್ರೇಷ್ಠ ಕಾರ್ಯ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜೀವನ ಅಮೂಲ್ಯವಾದದ್ದು. ಇದನ್ನು ಸದುಪಯೋಗಿಸಿಕೊಂಡು ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕೋಟೇಶ್ವರ ಗೀತಾ ಎಚ್.ಎಸ್.ಎನ್. ಫೌಂಡೇಶನ್ ಅಧ್ಯಕ್ಷ ಶಂಕರ ಐತಾಳ ಅಮಾಸೆಬೈಲು ಹೇಳಿದರು.
ಎಸ್ಎಸ್ಎಲ್ಸಿ ಪರೀೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ತೊಂಬಟ್ಟು ಪ್ರೀತಮ್ ಜಿ.ಪೂಜಾರಿ ಅವರಿಗೆ ಕೋಟೇಶ್ವರ ಗೀತಾ ಎಚ್ಎಸ್ಎನ್ ಫೌಂಡೇಶನ್, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್, ಕೋಟೇಶ್ವರ ಕರ್ನಾಟಕ ಶಿಕ್ಷಣ ಸಮನ್ವಯ ಮತ್ತು ತರಬೇತಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ತೊಂಬಟ್ಟು ಶ್ರೀ ಮಹಾಗಣಪತಿ ದೇವಳದ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಧಕ ವಿದ್ಯಾರ್ಥಿಗೆ ಪಾಲಕರೊಡನೆ ಸನ್ಮಾನ
ತೊಂಬಟ್ಟು ಶ್ರೀ ಮಹಾಗಣಪತಿ ದೇವಳ ಮೊಕ್ತೇಸರ ಸತ್ಯನಾರಾಯಣ ಉಡುಪ ಅಧ್ಯಕ್ಷತೆ ವಹಿಸಿದ್ದರು. ಸಾಧಕ ವಿದ್ಯಾರ್ಥಿ ಪ್ರೀತಮ್ ಜಿ.ಪೂಜಾರಿ ಹಾಗೂ ಪಾಲಕರಾದ ಗಣಪತಿ ಪೂಜಾರಿ, ನಾಗರತ್ನಾ ದಂಪತಿಯನ್ನು ಗೌರವಿಸಲಾಯಿತು.
ಗಣ್ಯರ ಉಪಸ್ಥಿತಿ
ಕೋಟೇಶ್ವರ ಗೀತಾ ಎಚ್ಎಸ್ಎನ್ ಫೌಂಡೇಶನ್ ಟ್ರಸ್ಟಿ ಮುಸ್ತಾಕ್ ಅಹಮ್ಮದ್ ಬೆಳ್ವೆ, ಕೋಶಾಧಿಕಾರಿ ಶ್ರೀರಾಮ ಅಡಿಗ ಹೆರಡೆಜೆಡ್ಡು, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೆ.ಸಂಜೀವ ಆರ್ಡಿ, ಪ್ರಮುಖರಾದ ವೈ.ಪಟ್ಟಾಭಿರಾಮ್ ಭಟ್, ಭಾರ್ಗವಿ ಪಿ.ಭಟ್, ಪ್ರಭಾಕರ ಶೆಟ್ಟಿ, ಅಬ್ದುಲ್ ಸಲಾಂ, ಗಣಪತಿ ಪೂಜಾರಿ, ನಾಗರತ್ನಾ ತೊಂಬಟ್ಟು ಮತ್ತಿತರರು ಉಪಸ್ಥಿತರಿದ್ದರು.
ಶಂಕರ ಐತಾಳ ಸ್ವಾಗತಿಸಿದರು. ಭಾರ್ಗವಿ ಪಿ.ಭಟ್ ಗೋಳಿಯಂಗಡಿ ಪ್ರಾರ್ಥಿಸಿದರು. ಪ್ರಭಾಕರ ಶೆಟ್ಟಿ ಹೊನ್ಕಲ್ಲು ಸನ್ಮಾನಿತರನ್ನು ಪರಿಚಯಿಸಿದರು. ವೈ.ಪಟ್ಟಾಭಿರಾಮ್ ಭಟ್ ಶುಭಾಶಂಸನೆಗೈದರು. ಕೆ.ಸಂಜೀವ ಆರ್ಡಿ ನಿರೂಪಿಸಿದರು. ಮುಸ್ತಾಕ್ ಅಹಮ್ಮದ್ ಬೆಳ್ವೆ ವಂದಿಸಿದರು.