crime 
ಉಡುಪಿ

ಅಜಾಗರೂಕತೆಯ ಚಾಲನೆ

ಇಂದಿರಾ ಎನ್ ಕೆ
ಕಾಸರಗೋಡು: ಪ್ರವಾಸಿತಾಣ ರಾಣಿಪುರ ಬೆಟ್ಟದ ರಸ್ತೆಯಲ್ಲಿ ಅಪಾಯಕಾರಿ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿದ ನಾಲ್ವರು ಯುವಕರ ವಿರುದ್ಧ ರಾಜಾಪುರಂ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಜೇಶ್ವರದ ಯುವಕರು ಗುರುವಾರ ಬೆಳಗ್ಗೆ ಎರಡು ಕಾರುಗಳಲ್ಲಿ ರಾಣಿಪುರ ಬೆಟ್ಟದ ರಸ್ತೆಗೆ ಆಗಮಿಸಿದ್ದು, ಈ ವೇಳೆ ಕಾರಿನ ಬಾಗಿಲುಗಳನ್ನು ತೆರೆದು ಕಾರಿನ ಮೇಲೆ ಕುಳಿತುಕೊಂಡು ಅಪಾಯಕಾರಿಯಾಗಿ ಸಂಚರಿಸಿದ್ದಾರೆ. ಅದನ್ನು ತಮ್ಮದೇ ಮೊಬೈಲಿನಲ್ಲಿ ಚಿತ್ರೀಕರಿಸಿಕೊಂಡ ಯುವಕರು ಬಳಿಕ ಅವರೇ ರಾಣಿಪುರಂ ಪೊಲೀಸರಿಗೆ ವಾಟ್ಸ್ಯಾಪ್ ಮೂಲಕ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ರಾಣಿಪುರಂ ಪೊಲೀಸರು ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಂಡು, ಕೇಸ್ ದಾಖಲಿಸಿ ದಂಡ ವಿಧಿಸಿದ್ದಾರೆ.