ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ ಬಳಿ ಜಲ್ಲಿ ರೆಡಿಮಿಕ್ಸ್ ಸಾಗಾಟ ಲಾರಿ ರಸ್ತೆಯಿಂದ ಕೆಳಕ್ಕುರುಳಿರುವುದು. 
ಉಡುಪಿ

ರೆಡಿಮಿಕ್ಸ್ ಸಾಗಾಟದ ಲಾರಿ ಪಲ್ಟಿ

ಗುರುಪುರ: ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಜಂಕ್ಷನ್‌ನಿಂದ ಅನತಿ ದೂರದಲ್ಲಿರುವ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಬಳಿ ಮಂಗಳವಾರ ಮಧ್ಯಾಹ್ನ ಜಲ್ಲಿ ರೆಡಿಮಿಕ್ಸ್ ಸಾಗಾಟ ಲಾರಿ ರಸ್ತೆಯಿಂದ ಕೆಳಕ್ಕುರುಳಿದೆ.
ಲಾರಿಯಲ್ಲಿ ಗುರುಪುರ ಕೈಕಂಬದಿಂದ ಮಂಗಳೂರಿನತ್ತ ಸಾಗಾಟದ ಜಲ್ಲಿ ರೆಡಿಮಿಕ್ಸ್ ತುಂಬಿತ್ತು. ಇಳಿಜಾರಾದ ಪ್ರದೇಶದಲ್ಲಿ ಹೆದ್ದಾರಿ ಬದಿಗೆ ಸರಿದ ಲಾರಿ ರಸ್ತೆಯಿಂದ ಕೆಳಕ್ಕುರುಳಿದೆ. ಲಾರಿಯಿಂದ ಇಳಿಯಲು ಪ್ರಯತ್ನಿಸಿದ ಕ್ಲೀನರ್‌ನ ಕಾಲಿಗೆ ಗಾಯವಾಗಿದೆ. ಘಟನೆ ವೇಳೆ ರಸ್ತೆ ಬದಿಯ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ತಕ್ಷಣದಿಂದ ಗುರುಪುರ ಆಸುಪಾಸಿನಲ್ಲಿ ಒಂದು ತಾಸು ವಿದ್ಯುತ್ ಸ್ಥಗಿತಗೊಂಡಿತ್ತು.