ಕುಂದಾಪುರ ಶಾಸಕರ ಕಚೇರಿಯಲ್ಲಿ ಗ್ರಂಥಾಲಯ ಉದ್ಘಾಟನೆ ಮತ್ತು ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭ ನಡೆಯಿತು 
ಉಡುಪಿ

ಕಡಿಮೆಯಾಗಿದೆ ಓದುವ ಹವ್ಯಾಸ

ಇಂದಿರಾ ಎನ್ ಕೆ
ಕುಂದಾಪುರ: ಓದುವ ಹವ್ಯಾಸ ಇಂದು ಕಡಿಮೆಯಾಗಿದೆ. ಮತ್ತೆ ಅದರೆಡೆಗೆ ಸೆಳೆಯಲು ಇಂತಹ ಪ್ರಯತ್ನಗಳು ಅವಶ್ಯ ಎಂದು ಶಾಸಕ ಕಿರಣ್ ಕುವಾರ್ ಕೊಡ್ಗಿ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿ ಆಶ್ರಯದಲ್ಲಿ ಕುಂದಾಪುರ ಶಾಸಕರ ಕಚೇರಿಯಲ್ಲಿ ಸೋಮವಾರ ಗ್ರಂಥಾಲಯ ಉದ್ಘಾಟನೆ ಮತ್ತು ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಣೆ ಸವಾರಂಭದಲ್ಲಿ ವಾತನಾಡಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ವಾನಸ, ಪ್ರಾಧಿಕಾರ ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿದರು.
ಪ್ರಾಧಿಕಾರದ ತಾಲೂಕು ಸದಸ್ಯರಾಗಿ ಆಯ್ಕೆಯಾದ ಪುಂಡಲೀಕ ನಾಯಕ್, ನರಸಿಂಹಮೂರ್ತಿ ಮಣಿಪಾಲ ಅವರಿಗೆ ನೇಮಕಾತಿ ಪತ್ರ ಹಸ್ತಾಂತರಿಸಲಾಯಿತು. ಗ್ರಂಥಾಲಯದ ಬಗೆಗಿನ ಕರಪತ್ರ ಬಿಡುಗಡೆ ನಡೆಯಿತು. ಸಾಹಿತಿ ಎ.ಎಸ್.ಎನ್.ಹೆಬ್ಬಾರ್, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಾಪ ತಾಲೂಕು ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಉಪಸ್ಥಿತರಿದ್ದರು. ನರೇಂದ್ರ ಕೋಟ ಸ್ವಾಗತಿಸಿದರು. ದಿನಕರ ಆರ್.ಶೆಟ್ಟಿ ಬಸ್ರೂರು ನಿರೂಪಿಸಿದರು.