ಬಾಗಲಕೋಟೆ ಟನೆ ಖಂಡಿಸಿ ಉಡುಪಿಯ ಜೋಡುಕಟ್ಟೆ ಬಳಿ ಹಿಂಜಾವೇ ಕರ್ನಾಟಕ ದಕ್ಷಿಣ ಸಂಘಟನೆಯಿಂದ ರಾಸ್ತಾ ರೋಖೋ ಪ್ರತಿಭಟನೆ ನಡೆಸಲಾಯಿತು. ಸುನೀಲ್ ಕೆ.ಆರ್., ರಾಜೇಶ್ ಉಚ್ಚಿಲ, ಮಹೇಶ್ ಬೈಲೂರು, ಉಮೇಶ್ ಪಕ್ಕಾಲು, ಉಮೇಶ್ ನಾಯಕ್ ಸೂಡ, ನವೀನ್ ಶೆಟ್ಟಿ ಕುತ್ಯಾರು, ವೀಣಾ ಶೆಟ್ಟಿ, ನೀತಾ ಪ್ರಭು ಇತರರಿದ್ದರು.
* ರಾಜ್ಯ ಸಕಾರಕ್ಕೆ ಸುನೀಲ್ ಕೆ.ಆರ್. ಆಗ್ರಹ
* ಬಾಗಲಕೋಟೆ ಘಟನೆ ಖಂಡಿಸಿ ಹಿಂಜಾವೇ ಪ್ರತಿಭಟನೆ
ಉಡುಪಿ: ಹಿಂದೂ ಧಮೀರ್ಯರ ಧಾರ್ಮಿಕ ಆಚರಣೆಗಳ ಮೇಲೆ ಮತಾಂಧ ಮುಸ್ಲೀಮರಿಂದ ಆಕ್ರಮಣ ಹೆಚ್ಚುತ್ತಿದ್ದು, ನಮ್ಮ ಧಾರ್ಮಿಕ ಭಾವನೆಗಳನ್ನು ಪದೇಪದೆ ಕೆಣಕುತ್ತಿದ್ದಾರೆ. ಹಿಂದೂ ಆಚರಣೆಗಳಿಗೆ ಭಂಗ, ಧಕ್ಕೆ ತರುವ ಕಾರ್ಯ ಮಾಡುತ್ತಿದ್ದಾರೆ. ಬಹುಸಂಖ್ಯಾತ ಹಿಂದುಗಳಿಗೆ ಕರ್ನಾಟಕದಲ್ಲಿ ರಕ್ಷಣೆ ಇಲ್ಲವೇ? ರಾಜ್ಯ ಕಾಂಗ್ರೆಸ್ ಸರ್ಕಾರ ಜಿಹಾದಿಗಳ ಸರ್ಕಾರ ಆಗದಿರಲಿ ಎಂದು ವಿಶ್ವ ಹಿಂದೂ ಪರಿಷತ್ನ ಪ್ರಾಂತ ಗೋರಕ್ಷಾ ಪ್ರಮುಖ್ ಸುನೀಲ್ ಕೆ.ಆರ್. ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆಯಲ್ಲಿ ಇತ್ತೀಚೆಗೆ ಛತ್ರಪತಿ ಶಿವಾಜಿ ಮಾಹಾರಾಜರ ಜಯಂತಿ ಕಾರ್ಯಕ್ರಮದ ಮೆರವಣಿಗೆಗೆ ಕಲ್ಲು ತೂರಾಟ ನಡೆಸಿದ್ದನ್ನು ಖಂಡಿಸಿ ಉಡುಪಿಯ ಜೋಡುಕಟ್ಟೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಕರ್ನಾಟಕ ದಕ್ಷಿಣ ಸಂಘಟನೆಯಿಂದ ಶನಿವಾರ (ಫೆ.21) ಸಂಜೆ ಆಯೋಜಿಸಿದ್ದ ರಾಸ್ತಾ ರೋಖೋ ಪ್ರತಿಭಟನೆಯಲ್ಲಿ ಮಾತನಾಡಿದರು.
ತಕ್ಕ ಪಾಠದ ಎಚ್ಚರಿಕೆ
ಚಿಕ್ಕಮಗಳೂರು, ಮೈಸೂರು, ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆಗೆ ಕಲ್ಲು, ಚಪ್ಪಲಿ ಎಸೆಯಲಾಗಿದೆ. ಅದನ್ನು ನೋಡಿಯೂ ನಾವು ಸುಮ್ಮನಿರಬೇಕೇ? ತಾಳ್ಮೆಗೂ ಒಂದು ಮಿತಿ ಇರುತ್ತದೆ. ನ್ಯಾಯಯುತವಾಗಿ ಹಿಂದೂಗಳಿಗೆ ರಕ್ಷಣೆ ನೀಡಿ. ಇಲ್ಲದಿದ್ದಲ್ಲಿ ಹಿಂದೂ ಸಂಘಟನೆಗಳೇ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಾಗಲಕೋಟೆ ಘಟನೆ ಖಂಡಿಸಿ ನಿಗದಿತ ಅವಧಿಗಿಂತ ಹೆಚ್ಚು ಸಮಯ ರಸ್ತೆ ತಡೆ ನಡೆಸಲು ಮುಂದಾದ ಹಿಂದೂ ಮುಖಂಡರನ್ನು ಪೊಲೀಸರು ಚದುರಿಸಿದರು. ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ ರಾಜೇಶ್ ಉಚ್ಚಿಲ, ಪ್ರಾಂತ ಪ್ರಮುಖ್ ಮಹೇಶ್ ಬೈಲೂರು, ಜಿಲ್ಲಾ ಸಹ ಸಂಯೋಜಕ ಉಮೇಶ್ ಪಕ್ಕಾಲು, ಹಿಂದೂ ಯುವಸೇನಾ ಜಿಲ್ಲಾಧ್ಯಕ್ಷ ಅಜಿತ್ ಕೊಡವೂರು, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಅಲೆವೂರು, ಕಾಪು ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಬಿಜೆಪಿಯ ವೀಣಾ ಶೆಟ್ಟಿ, ನೀತಾ ಪ್ರಭು ಇತರರು ಪಾಲ್ಗೊಂಡಿದ್ದರು.
ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಮೆರವಣಿಗೆಗೆ ಮತಾಂಧ, ಕಿಡಿಗೇಡಿ ಮುಸಲ್ಮಾನರು ಕಲ್ಲು ತೂರಿದ್ದಾರೆ. ಅವರಿಗೆ ಈ ದೇಶದ ಕಾನೂನಿನ ಭಯವಿಲ್ಲ. ನಿರಂತರವಾಗಿ ಹಿಂದೂ ಧಾರ್ಮಿಕ ಆಚರಣೆಗೆ ತೊಂದರೆ ಕೊಡುತ್ತಿದ್ದಾರೆ. ಇದಕ್ಕೆ ರಾಜ್ಯದಲ್ಲಿ ಮುಸ್ಲಿಂ ತುಷ್ಟೀಕರಣದ ರಾಜನೀತಿ ಕಾರಣವಾಗಿದೆ. ಕಲ್ಲು ತೂರಾಟ ನಡೆಸಿರುವ ಮಸೀದಿಯ ಆಡಳಿತ ಮಂಡಳಿಯ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು.