ರಾಮಂಚಿರ ಸೇತುವೆಯನ್ನು ರಿಬ್ಬರ್ ಕತ್ತರಿಸುವ ಮೂಲಕ ಶಾಸಕ ಎಂ.ರಾಜಗೋಪಾಲನ್ ಲೋಕಾರ್ಪಣೆ ಮಾಡಿದರು. ಸಿ.ಎಂ.ಮೀನಾಕುಮಾರಿ, ಟಿ.ನಾರಾಯಣನ್, ಎಂ.ಪಿ.ವಿ.ಜಾನಕಿ ಮತ್ತಿತರರಿದ್ದರು. 
ಉಡುಪಿ

ರಾಮಂಚಿರ ಸೇತುವೆ ಲೋಕಾರ್ಪಣೆ

ಇಂದಿರಾ ಎನ್ ಕೆ
ಕಾಸರಗೋಡು: ಸರ್ಕಾರ ರಸ್ತೆ ಅಭಿವೃದ್ಧಿಗೆ 35,000 ಕೋಟಿ ರೂ. ಖರ್ಚು ಮಾಡಿದ್ದು, ಐದು ವರ್ಷಗಳಲ್ಲಿ 150 ಸೇತುವೆಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ 528 ಯೋಜನೆಗಳಿಗೆ ಕಿಫ್‌ಬಿ ಮೂಲಕ 46,145 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಸಚಿವ ಪಿ.ಎ.ಮುಹಮ್ಮದ್ ರಿಯಾಜ್ ತಿಳಿಸಿದರು.  
 ಚೆರುವತ್ತೂರು ಮತ್ತು ಕಯ್ಯೂರು ಚೀಮೇನಿ ಪಂಚಾಯಿತಿಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಂಚಿರ ಸೇತುವೆಯನ್ನು ಆನ್‌ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು. 
 ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಿ.ಎಂ.ಮೀನಾಕುಮಾರಿ, ಚೆರುವತ್ತೂರು ಗ್ರಾಪಂ ಅಧ್ಯಕ್ಷ ಟಿ.ನಾರಾಯಣನ್, ಕಯ್ಯೂರು ಚೀಮೇನಿ ಗ್ರಾಪಂ ಅಧ್ಯಕ್ಷೆ ಎಂ.ಪಿ.ವಿ.ಜಾನಕಿ, ಬ್ಲಾಕ್ ಪಂಚಾಯಿತಿ ಸದಸ್ಯ ಕೆ.ರಾಜು, ಗ್ರಾಪಂ ಸದಸ್ಯರಾದ ರಜಿತಾ, ಶಶಿಧರನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪಿ.ಜನಾರ್ದನನ್, ಕೆ.ವಿ.ಸುಧಾಕರನ್, ಸಿ.ವಿ.ವಿಜಯರಾಜ್, ಪಿ.ಸಿ.ಅಬ್ದುಲ್ ರೆಹಮಾನ್, ಸಿ.ಜಿ.ಕಟ್ಟಕ್ಯಂ, ಮಮ್ಮು ಕೊಟ್ಟ ಉಪಸ್ಥಿತರಿದ್ದರು. 
 ಸೇತುವೆ ಕಾಮಗಾರಿಗೆ ನೇತೃತ್ವ ವಹಿಸಿದ ಗುತ್ತಿಗೆದಾರರು, ಇಂಜಿನಿಯರ್‌ಗಳು ಮತ್ತು ಸಹಾಯಕ ಇಂಜಿನಿಯರ್‌ಗಳನ್ನು ಸನ್ಮಾನಿಸಲಾಯಿತು. ಕೆಆರ್‌ಎಫ್‌ಬಿ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಜೆ.ಕೃಷ್ಣನ್ ಸ್ವಾಗತಿಸಿದರು. ಕೆಆರ್‌ಎಫ್‌ಬಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಜಯದೀಪ್ ಕುಮಾರ್ ವಂದಿಸಿದರು.