ಕಾರ್ಕಳದಲ್ಲಿ ಗಾಳಿ- ಮಳೆಗೆ ಹಾನಿ ಸಂಭವಿಸಿರುವುದು.
- ತಾಲೂಕಿನಾದ್ಯಂತ ಭಾರೀ ಗಾಳಿ-ಮಳೆ
- ಮನೆಗೆ ಸಿಡಿಲು ಬಡಿದು ನಷ್ಟ
ಕಾರ್ಕಳ: ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಸುರಿದ ಭಾರಿ ಗಾಳಿ- ಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ.
ಕಲ್ಯಾ ಗ್ರಾಮದ ಅಶೋಕ ನಗರದಲ್ಲಿ ಚಂದ್ರಶೇಖರ್ ಆಚಾರ್ಯ ಎಂಬುವರ ಮನೆಗೆ ಸಂಜೆ 6ರ ವೇಳೆಗೆ ಸಿಡಿಲು ಬಡಿದು ನಷ್ಟ ಸಂಭವಿಸಿದೆ.
ಬಂಗ್ಲೆಗುಡ್ಡೆ ಸದ್ಭಾವನಗರ ನಿವಾಸಿ ಮಾಧವ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ‘
ಕಡ್ತಲ ಗ್ರಾಮದ ಆನಂದ ನಾಯಕ್ ಅವರ ಅಡಿಕೆ ತೋಟದಲ್ಲಿ ಗಾಳಿ ಮಳೆಯಿಂದ ಹಲವು ಅಡಿಕೆ ಮರಗಳು ತುಂಡಾಗಿ ಬಿದ್ದಿವೆ.