ಅಕ್ರಮ ಕಸಾಯಿಖಾನೆಗೆ ದಾಳಿ 
ಉಡುಪಿ

ಅಕ್ರಮ ಕಸಾಯಿಖಾನೆಗೆ ದಾಳಿ: 98 ಕೆ.ಜಿ.ಗೋಮಾಂಸ ಪತ್ತೆ

ಇಂದಿರಾ ಎನ್ ಕೆ
ಕಾರ್ಕಳ: ನಲ್ಲೂರು ಗ್ರಾಮದ ಕರ್ಮರಟ್ಟೆ ಪಡೀಲುಬೆಟ್ಟು ಎಂಬಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿ ನಲ್ಲೂರು ಗ್ರಾಮದ ರುಕ್ಸರ್ ಆಲಿ(43) ಎಂಬಾತನನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ.
ಅಶ್ರಫ್ ಎಂಬಾತ ಪಡೀಲುಬೆಟ್ಟುವಿನ ತನ್ನ ಮನೆಯನ್ನೇ ಅಕ್ರಮ ಕಸಾಯಿಖಾನೆಯಾಗಿ ಮಾರ್ಪಡಿಸಿ ಗೋಮಾಂಸ ದಂಧೆ ನಡೆಸುತ್ತಿದ್ದ. ಅ್ತಾಬ್ ಹಾಗೂ ಬಂಧಿತ ರುಕ್ಸರ್ ಆಲಿ ಈತನಿಗೆ ಸಹಕರಿಸುತ್ತಿದ್ದರು.
ಸ್ಥಳೀಯರು ನೀಡಿದ ಮಾಹಿತಿಯಂತೆ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ರುಕ್ಸರ್ ಆಲಿಯನ್ನು ಬಂಧಿಸಿದರು. ಪರಾರಿಯಾಗಿರುವ ಇಬ್ಬರಿಗಾಗಿ ಶೋಧಿಸಲಾಗುತ್ತಿದೆ. ದನ ಸಾಗಾಟಕ್ಕೆ ಬಳಸುತ್ತಿದ್ದ ಕಾರು ಹಾಗೂ 98.6 ಕೆ.ಜಿ. ಗೋಮಾಂಸ, ಕೃತ್ಯಕ್ಕೆ ಬಳಸುತ್ತಿದ್ದ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ.