ಉಡುಪಿಯಲ್ಲಿ ಆಯೋಜಿಸಿದ್ದ ರಾಹುಲ್​ ಗಾಂಧಿ ಜನ್ಮ ದಿನಾಚರಣೆಯನ್ನು ಅಶೋಕಕುಮಾರ್​ ಕೊಡವೂರು ಉದ್ಘಾಟಿಸಿದರು. ಪ್ರಸಾದ್​ರಾಜ್​ ಕಾಂಚನ್​, ಎಂ.ಎ. ಗೂರ್​, ರಮೇಶ್​ ಕಾಂಚನ್​, ಹರಿಪ್ರಸಾದ್​ ರೈ, ಕಿಶನ್​ ಹೆಗ್ಡೆ ಕೊಳ್ಕೆಬೈಲು, ರಾವೇಂದ್ರ ಎಸ್​., ಪ್ರಖ್ಯಾತ್​ ಶೆಟ್ಟಿ, ನರಸಿಂಹ ಮೂರ್ತಿ, ಕುಶಲ್​ ಶೆಟ್ಟಿ ಇಂದ್ರಾಳಿ ಇತರರಿದ್ದರು. 
ಉಡುಪಿ

ಬಡವರ ಅಭಿವೃದ್ಧಿಯೇ ಕಾಂಗ್ರೆಸ್​ ಧ್ಯೇಯ

ಕಾಂಗ್ರೆಸ್ ಮುಖಂಡ ಪ್ರಸಾದ್​ರಾಜ್​ ಕಾಂಚನ್​ ಅಭಿಪ್ರಾಯ

* ಉಡುಪಿ ಬ್ಲಾಕ್​ ಸಮಿತಿಯಿಂದ ರಾಹುಲ್​ ಗಾಂಧಿ ಜನ್ಮದಿನಾಚರಣೆ

ಉಡುಪಿ: ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್​ ಕೊಡುಗೆ ಅಪಾರವಾಗಿದೆ. ಕಾಂಗ್ರೆಸ್​ ಸರ್ಕಾರ ಆಡಳಿತದ ಅವಧಿಯಲ್ಲಿ ಬಡವರ ಉದ್ಧಾರಕ್ಕಾಗಿ ಕೈಗೊಂಡ ಯೋಜನೆಗಳ ಪರಿಣಾಮವಾಗಿ ಭಾರತ ಇಂದು ಅಭಿವೃದ್ಧಿಯ ಹಾದಿಯಲ್ಲಿದೆ. ಕಾಂಗ್ರೆಸ್​ ಸರ್ಕಾರದ ಆಡಳಿತ ಇಲ್ಲದಿದ್ದಲ್ಲಿ ಬಡವರು ಇನ್ನಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ. ಬಡವರ ಅಭಿವೃದ್ಧಿಯೇ ಕಾಂಗ್ರೆಸ್​ನ ಧ್ಯೇಯ ಎಂದು ಮುಖಂಡ ಪ್ರಸಾದ್​ ರಾಜ್​ ಕಾಂಚನ್​ ಅಭಿಪ್ರಾಯಪಟ್ಟರು.  
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್​ ಭವನದಲ್ಲಿ ಉಡುಪಿ ಬ್ಲಾಕ್​ ಕಾಂಗ್ರೆಸ್​ ಸಮಿತಿ ವತಿಯಿಂದ ಶುಕ್ರವಾರ (ಜೂ.19) ಆಯೋಜಿಸಿದ್ದ ಕಾಂಗ್ರೆಸ್​ನ ರಾಷ್ಟ್ರೀಯ ನಾಯಕ ರಾಹುಲ್​ ಗಾಂಧಿ ಅವರ ಜನ್ಮದಿನ ಹಾಗೂ ಸಹಾಯಕ ಸಾಧನ ಹಾಗೂ ಪೌಷ್ಟಿಕ ಆಹಾರಗಳ ಕಿಟ್​ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಪ್ರಸಾದ್​ ರಾಜ್​ ಕಾಂಚನ್ ಮಾತನಾಡಿದರು.
ನೆಹರೂ ದೂರದೃಷ್ಟಿತ್ವ ಕಾರಣ
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ್ದ ಸಂದರ್ಭದಲ್ಲಿ ದೇಶದಲ್ಲಿ ಶೇ.3 ಜನರಿಗೆ ಮಾತ್ರ ಶಿಕ್ಷಣದ ಅವಕಾಶವಿತ್ತು. ಕೈಗಾರಿಕಾ ಕ್ಷೇತ್ರವೂ ಅಭಿವೃದ್ಧಿ ಆಗಿರಲಿಲ್ಲ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ದೂರದೃಷ್ಟಿಯಿಂದ ಅಂದಿನ ಪ್ರಧಾನಿ ಜವಾಹರ ಲಾಲ್​ ನೆಹರೂ ಅವರು ಪ್ರಬಲ ಅಡಿಪಾಯ ಹಾಕಿದ್ದರು. ಅದರ ಪರಿಣಾಮದಿಂದಲೇ ಇಂದು ಭಾರತ ಉನ್ನತ ಸ್ಥಾನ ತಲುಪಲು ಸಾಧ್ಯವಾಗಿದೆ. ಅದೇ ಕುಟುಂಬದ ರಾಹುಲ್​ ಗಾಂಧಿ ಅವರೂ ಸಹ ದೇಶದ ಬಡವರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಅಶೋಕಕುಮಾರ್​ ಕೊಡವೂರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. 
75 ಮಂದಿ ವಿಶೇಷ ಚೇತನರಿಗೆ ಸಹಾಯಕ ಸಾಧನಗಳಾದ ಶ್ರವಣ ಸಾಧನ, ಕಂಬೋಡ್​ ವ್ಹೀಲ್​ ಚೇರ್​, ವಾಟರ್​ ಬೆಡ್​, ವಾಕರ್​, ವಾಕಿಂಗ್​ ಸ್ಟಿಕ್​, ಕಚ್​ ಹಾಗೂ ಪೌಷ್ಟಿಕ ಆಹಾರಗಳ ಕಿಟ್​ ವಿತರಿಸಲಾಯಿತು. ಉಡುಪಿ ಬ್ಲಾಕ್​ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ರಮೇಶ್​ ಕಾಂಚನ್​ ಅಧ್ಯಕ್ಷತೆ ವಹಿಸಿದ್ದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗೂರ್​, ಪ್ರಮುಖರಾದ ಕಿಶನ್​ ಹೆಗ್ಡೆ ಕೊಳ್ಕೆಬೈಲು, ಹರಿಪ್ರಸಾದ್​ ರೈ, ಕಾನೂನು ಸೇವೆಗಳ ಪ್ರಾಧಿಕಾರದ ರಾವೇಂದ್ರ ಎಸ್​., ಜಿಲ್ಲಾ ಸಮಿತಿ ಉಪಾಧ್ಯಕ್ಷ ಪ್ರಖ್ಯಾತ್​ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯೆ ಜ್ಯೋತಿ ಹೆಬ್ಬಾರ್​, ಕುಶಲ್​ ಶೆಟ್ಟಿ ಇಂದ್ರಾಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಮೂರ್ತಿ, ಮಹಾಬಲ ಕುಂದರ್​, ಕೇಶವ್​ ಕೋಟ್ಯಾನ್​, ಸದಾನಂದ್​ ಕಾಂಚನ್​, ಕೀರ್ತಿ ಶೆಟ್ಟಿ, ಅಬೀಬ್​ ಅಲಿ, ಪ್ರಶಾಂತ್​ ಜತ್ತನ್​, ಗಣೇಶ್​ ನೆರ್ಗಿ, ಸಜ್ಜನ್​ ಶೆಟ್ಟಿ, ಮಮತಾ ಶೆಟ್ಟಿ, ಹರೀಶ್​ ಕಿಣಿ ಇತರರು ಉಪಸ್ಥಿತರಿದ್ದರು. ಸತೀಶ್​ ಕೊಡವೂರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
"

ರಾಹುಲ್​ ಗಾಂಧಿ ಅವರು ದೇಶದ ಭವಿಷ್ಯದ ನಾಯಕರಾಗಿದ್ದು ಎಷ್ಟೇ ಟೀಕೆ ಅನುಭವಿಸಿದರೂ ಕೂಡ ಎದೆಗುಂದದೆ ಸಾಮಾಜಿಕ ನ್ಯಾಯದ ಪರ ದನಿ ಎತ್ತುವ ಕೆಲಸ ಮಾಡುತ್ತಿದ್ದಾರೆ. ಜನರ ನೋವಿಗೆ ನಿರಂತರ ಸ್ಪಂದಿಸುವ, ಸಾಮಾಜಿಕ ನ್ಯಾಯದ ಪರ ಹೋರಾಡುವ, ಮಾನವೀಯ ಹೃದಯದ ನಾಯಕ ರಾಹುಲ್​ ಗಾಂಧಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದೇವೆ.

— ಅಶೋಕಕುಮಾರ್​ ಕೊಡವೂರು. ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ.