ಕಾಲಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವ ಸಿನಾನ್.
ಉಪ್ಪಳ: ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತ್ತೆ ಜೂನಿಯರ್ ವಿದ್ಯಾರ್ಥಿಗಳ ವಿರುದ್ಧ ರ‌್ಯಾಗಿಂಗ್ ನಡೆದಿದೆ. ಮಣಿಮುಂಡ ಮೂಲದ ಅಬ್ದುಲ್ ಅಜೀಜ್ ಎಂಬುವರ ಪುತ್ರ ಮುಹಮ್ಮದ್ ಸಿನಾನ್ ಮತ್ತು ಅವರ ಸಹಪಾಠಿ ಅಹ್ಮದ್ ಶಮಿಲ್ ಹಿರಿಯ ವಿದ್ಯಾರ್ಥಿಗಳ ದಾಳಿಗೊಳಗಾಗಿ ಗಾಯಗೊಂಡಿದ್ದಾರೆ.
ಇಬ್ಬರೂ ಪ್ಲಸ್ ಒನ್ ವಿದ್ಯಾರ್ಥಿಗಳಾಗಿದ್ದು ಶೂ ಧರಿಸಿ ಬಂದು ಶರ್ಟ್‌ನ ಮೇಲಿನ ಗುಂಡಿ ಬಿಚ್ಚಿದ್ದಾರೆ ಹಿರಿಯ ವಿದ್ಯಾರ್ಥಿಗಳು ರ‌್ಯಾಗಿಂಗ್ ಮಾಡಿದ್ದಾರೆ. ಮುಹಮ್ಮದ್ ಸಿನಾನ್ ಕಾಲಿಗೆ ಮತ್ತು ಅಹ್ಮದ್ ಶಮಿಲ್ ಅವರ ಮುಖಕ್ಕೆ ಗಂಭೀರ ಗಾಯಗಳಾಗಿವೆ.
ಮಂಜೇಶ್ವರ ಪೋಲೀಸರು 14 ಹಿರಿಯ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು ನಾಲ್ವರು ಹಿರಿಯ ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ. ಇಂತಹ ಘಟನೆ ಮರುಕಳಿಸದಂತೆ ವಿದ್ಯಾರ್ಥಿಗಳ ಪಾಲಕರು ಪ್ರತಿಭಟನೆ ನಡೆಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.