ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ನವೀಕರಿಸಿದ ಮನೆಯನ್ನು ನಾರಾಯಣ ನಾಯ್ಕ-ಗೌರಿ ದಂಪತಿಗೆ ಹಸ್ತಾಂತರಿಸಲಾಯಿತು. ಟ್ರಸ್ಟ್ ಸಂಚಾಲಕ ಅರುಣ್‌ಕುಮಾರ್ ಪುತ್ತಿಲ, ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ಪ್ರಧಾನ ಕಾರ್ಯದರ್ಶಿ ಪ್ರೇಮ್‌ರಾಜ್ ಆರ್ಲಪದವು ಮತ್ತಿತರರು ಇದ್ದರು.
ಪುತ್ತೂರು ಗ್ರಾಮಾಂತರ: ಪ್ರಧಾನಿಯಾಗಿ ನರೇಂದ್ರ ಮೋದಿ ದೀರ್ಘಾವಧಿ ಆಡಳಿತ ನಡೆಸಿದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಸ್ವಚ್ಛ ಭಾರತ ಅಭಿಯಾನದ ಆಶಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಪಾಣಾಜೆ ಗ್ರಾಮದ ತೂಂಬಡ್ಕ ನಿವಾಸಿಗಳಾದ ವೃದ್ಧ ದಂಪತಿ ನಾರಾಯಣ ನಾಯ್ಕ-ಗೌರಿ ಅವರಿಗೆ ಶೌಚಗೃಹ ವ್ಯವಸ್ಥೆಯೊಂದಿಗೆ ಮನೆ ನವೀಕರಣ ಮಾಡಿಕೊಡಲಾಗಿದೆ.
ನವೀಕೃತ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ಪ್ರಧಾನ ಕಾರ್ಯದರ್ಶಿ ಪ್ರೇಮ್‌ರಾಜ್ ಆರ್ಲಪದವು, ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ನೆಕ್ಕಿಲಾಡಿ, ನಿರ್ದೇಶಕರಾದ ಸುಜಿತ್ ಕಜೆ, ಮನೀಶ್ ಕುಲಾಲ್, ಧೀರನ್, ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಟ್ರಸ್ಟ್ ಮಾರ್ಗದರ್ಶಕರಾದ ರಾಕೇಶ್ ರೈ ಕಡಮಾಜೆ, ಹರಿಪ್ರಸಾದ್ ಕಾಸರಗೋಡು, ಪಾಣಾಜೆ ಗ್ರಾಮ ಸಮಿತಿ ಅಧ್ಯಕ್ಷ ಶ್ರೀನಿವಾಸ ಕುಲಾಲ್ ಉಡ್ಡಂಗಳ, ಪ್ರಧಾನ ಕಾರ್ಯದರ್ಶಿ ಸುಖಿನ್ ರಾಜ್ ಕೊಂದಲ್ಮಾನ, ಪದಾಧಿಕಾರಿಗಳಾದ ಪ್ರದೀಪ್ ಪಾಣಾಜೆ, ವಸಂತಕುಮಾರ್ ಭರಣ್ಯ, ಸಂದೀಪ್ ಕಡಮಾಜೆ, ರವೀಂದ್ರ ಭರಣ್ಯ, ಶಶಿಕಾಂತ್ ವಾಣಿಯನ್, ರವಿಚಂದ್ರ ಕೊಂದಲಡ್ಕ, ಮೋಹನ್ ನಾಯ್ಕ ತೂಂಬಡ್ಕ, ಕೀರ್ತಿರಾಜ್ ಉಡ್ಡಂಗಳ, ಸುರೇಶ್ ತೂಂಬಡ್ಕ, ವಿನು ಭರಣ್ಯ, ಜಯಪ್ರಸಾದ್ ರೈ ಕೋಟೆ, ಮಹೇಶ್ ಭರಣ್ಯ ಮತ್ತಿತರರು ಉಪಸ್ಥಿತರಿದ್ದರು.
ನೋವು ತೋಡಿಕೊಂಡಿದ್ದ ದಂಪತಿ
ಪಾಣಾಜೆ ಗ್ರಾಮದ ಕಾರ್ಯಕರ್ತರೊಬ್ಬರ ಮನೆಯಲ್ಲಿ ನಡೆದ ಶುಭ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಬಳಿ ನಾರಾಯಣ ನಾಯ್ಕ-ಗೌರಿ ದಂಪತಿ ತಮ್ಮ ಮನೆಯಲ್ಲಿ ಶೌಚಗೃಹ ವ್ಯವಸ್ಥೆ ಇಲ್ಲ. ಹುಟ್ಟಿನಿಂದಲೂ ನಾವು ಶೌಚಗೃಹ ಬಳಸಿಲ್ಲ ಎಂಬ ನೋವು ತೋಡಿಕೊಂಡಿದ್ದರು. ಈ ವೇಳೆ ಅರುಣ್‌ಕುಮಾರ್ ಪುತ್ತಿಲ ಅವರು ಗ್ರಾಮ ಸಮಿತಿಯ ಕಾರ್ಯಕರ್ತರೊಂದಿಗೆ ಚರ್ಚಿಸಿ ಕೈಗೊಂಡ ನಿರ್ಧಾರದಂತೆ ನೂತನ ಶೌಚಗೃಹ ನಿರ್ಮಿಸಿಕೊಡಲಾಗಿದೆ. ಜತೆಗೆ ಮನೆಗೆ ಕಿಟಕಿ, ಬಾಗಿಲುಗಳು ಇಲ್ಲದಿರುವುದನ್ನು ಗಮನಿಸಿ ನವೀಕರಣವನ್ನೂ ಮಾಡಲಾಯಿತು.