ಸೋದೆ ಶ್ರೀಗಳು  
ಉಡುಪಿ

ಶುದ್ಧ ನೈವೇದ್ಯ ಸಮರ್ಪಣಾ ಅಭಿಯಾನ: ಸೋದೆ ಶ್ರೀ ಪಾದಯಾತ್ರೆ

ಉಡುಪಿ: ಸೋದೆ ಪರ್ಯಾಯ ಅವಧಿಯಲ್ಲಿ ಅನ್ನಬ್ರಹ್ಮ ಶ್ರೀಕೃಷ್ಣನಿಗೆ ದಿನಕ್ಕೊಂದು ದೇಸಿ ತಳಿಯ ನೈವೇದ್ಯ ಸಮರ್ಪಣೆ ಮಾಡುವ ಉದ್ದೇಶದಿಂದ ಹಾದಿಗಲ್ಲು ಶ್ರೀ ಅಭಯಲಕ್ಷ್ಮೀನರಸಿಂಹ ದೇವಸ್ಥಾನ , ಕರ್ನಾಟಕದ ಕೃಷಿ ಪ್ರಯೋಗ ಪರಿವಾರ ಸಂಸ್ಥೆಯು ಸಹಯೋಗದಲ್ಲಿ ಶುದ್ಧ ನೈವೇದ್ಯ ಸಮರ್ಪಣೆ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಯೋಜನೆ ಬಗ್ಗೆ ಜನಜಾಗೃತಿಗಾಗಿ ಶ್ರೀ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಜುಲೈ 12 ಮತ್ತು 13 ರಂದು ಪಾದಯಾತ್ರೆ ನಡೆಸಲಿದ್ದಾರೆ.

ಜುಲೈ 12ರಂದು ಮಧ್ಯಾಹ್ನ 3.30 ರಿಂದ ಹೊಸನಗರ ತಾಲೂಕಿನ ಕೊಳವಂಕದಲ್ಲಿ ಪಾದಯಾತ್ರೆ ಆರಂಭವಾಗಲಿದೆ. ಜುಲೈ 13ರಂದು ಮಧ್ಯಾಹ್ನ 3.30 ರಿಂದ ತೀರ್ಥಹಳ್ಳಿ ತಾಲೂಕಿನ ಅರಳಸುರುಳಿಯಲ್ಲಿ ಪಾದಯಾತ್ರೆ ನಡೆಯಲಿದೆ.