ಬೆಳ್ವೆ ಸಂದೇಶ್ ಕಿಣಿ ಮೆಮೂರಿಯಲ್ ಸಭಾಂಗಣದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸಹಾಯಧನ ಹಸ್ತಾಂತರ ಕಾರ್ಯಕ್ರಮ ಭಾನುವಾರ ನಡೆಯಿತು. 
ಉಡುಪಿ

ಸವಾಜಮುಖಿ ಸೇವಾ ಕಾರ್ಯ ಶ್ರೇಷ್ಠ

ಇಂದಿರಾ ಎನ್ ಕೆ
ಬೆಳ್ವೆ: ಜಾತಿ, ಧರ್ಮಗಳ ಭೇದಭಾವವಿಲ್ಲದೇ ಸವಾಜದಲ್ಲಿ ಆಶಕ್ತರ ಬಾಳಿಗೆ ಸಹಾಯ ನೀಡುವ ಸವಾಜಮುಖಿ ಸೇವಾ ಕಾರ್ಯ ಶ್ರೇಷ್ಠವಾಗಿದೆ. ಅನಾರೋಗ್ಯದಿಂದ ಬಳಲುವವರು ಯಾವುದೇ ಕೀಳರಿಮೆಯಿಲ್ಲದೆ ಆತ್ಮಸ್ಥೈರ್ಯವಿಟ್ಟುಕೊಂಡಾಗ ಆರೋಗ್ಯದಲ್ಲಿ ಚೇತರಿಕೆಯೊಂದಿಗೆ ಉತ್ತಮ ಬೆಳವಣಿಗೆ ಕಾಣಲು ಸಾಧ್ಯವಿದೆ ಎಂದು ಕೊಕ್ಕರ್ಣೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹರ್ಷ ಪೂಜಾರಿ ಹೇಳಿದರು.
ಬೆಳ್ವೆ ಟೀಮ್ ಮಲೆನಾಡು ಹ್ಯೂವ್ಯಾನಿಟೇರಿಯನ್ ಟ್ರಸ್ಟ್ ವತಿಯಿಂದ ಭಾನುವಾರ ಬೆಳ್ವೆ ಸಂದೇಶ್ ಕಿಣಿ ಮೆಮೂರಿಯಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ರೋಗಿಗಳಿಗೆ ಸಹಾಯಧನ ಹಸ್ತಾಂತರ ಕಾರ್ಯಕ್ರಮದಲ್ಲಿ ವಾತನಾಡಿದರು.
ಬೆಳ್ವೆ ಟೀಮ್ ಮಲೆನಾಡು ಹ್ಯೂವ್ಯಾನಿಟೇರಿಯನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಫೀಕ್ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು. 7 ಮಂದಿ ಕ್ಯಾನ್ಸರ್ ರೋಗಿಗಳಿಗೆ ಸಹಾಯಧನ, ಒಬ್ಬರಿಗೆ ಕೃತಕ ಕಾಲು ಜೋಡಣೆಗೆ ಆರ್ಥಿಕ ನೆರವು, ಬಡ ಕುಟುಂಬದ ಯುವತಿಯ ಮದುವೆಗೆ ಸಹಾಯಧನ ಚೆಕ್ ನೀಡಲಾಯಿತು.
ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ, ನಮ್ಮ ನಾಡ ಒಕ್ಕೂಟ ಹೆಬ್ರಿ ಟಕದ ಅಧ್ಯಕ್ಷ ಅನ್ಸಾರ್ ಹೊಸಂಗಡಿ, ಪ್ರಮುಖರಾದ ಶರೀಫ್ ಸಾಹೇಬ್, ಮುಸ್ತಾಕ್ ಅಹಮ್ಮದ್, ಅನ್ವರ್ ಕಂಡ್ಲೂರು, ಅಬ್ದುಲ್ ಶುಕುರ್, ಮೊಹಮ್ಮದ್ ಆಸೀಫ್, ಅಹಮ್ಮದ್ ಬ್ಯಾರಿ, ಕೆ.ಸಂಜೀವ ಆರ್ಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಮುಸ್ತಾಕ್ ಅಹಮ್ಮದ್ ಸ್ವಾಗತಿಸಿದರು. ಹುಝೈಫ್ ಕುರಾನ್ ಪಠಿಸಿದರು. ಮೊಹಮ್ಮದ್ ರಬಿ ನಿರೂಪಿಸಿದರು. ಅಬ್ದುಲ್ ಶುಕುರ್ ಸಹಕರಿಸಿದರು. ಜಾಸಿಂ ಬೆಳ್ವೆ ವಂದಿಸಿದರು.

ಶೈಕ್ಷಣಿಕ, ವೈದ್ಯಕೀಯ ಸೇರಿದಂತೆ ಹಲವಾರು ಸವಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಬೆಳ್ವೆ ಟೀಮ್ ಮಲೆನಾಡು ಹ್ಯೂವ್ಯಾನಿಟೇರಿಯನ್ ಟ್ರಸ್ಟ್‌ನ ಕಾರ್ಯಕ್ರಮಗಳು ಪ್ರಶಂಸನೀಯ. ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಜಂಟಿ ಆಶ್ರಯದಲ್ಲಿ ಇನ್ನಷ್ಟು ಸೇವಾ ಕಾರ್ಯಗಳೊಂದಿಗೆ ಸ್ಪಂದಿಸುತ್ತಿರುವುದು ಉತ್ತಮ ಬೆಳವಣಿಗೆಗೆ ಸ್ಫೂರ್ತಿ ನೀಡುತ್ತಿದೆ.