ಸಾಣೂರು ಯುವಕ ಮಂಡಲ ಹಾಗೂ ಶ್ರೀವಾಣಿ ಯಕ್ಷಗಾನ ಸಭಾ ಯುವಕ ಮಂಡಲದ ವಾರ್ಷಿಕೋತ್ಸವದಲ್ಲಿ ಮುರಳೀಧರ ಭಟ್ ಅವರಿಗೆ ಯಕ್ಷಶ್ರೀ ಪ್ರಶಸ್ತಿ ಪ್ರದಾನಿಸಲಾಯಿತು.  
ಉಡುಪಿ

ಸಾಣೂರು ಯುವಕ ಮಂಡಲದಿಂದ ಜನಪರ ಕಾರ್ಯ

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಸಾಣೂರು ಯುವಕ ಮಂಡಲದ 72ನೇ ವಾರ್ಷಿಕೋತ್ಸವ ಹಾಗೂ ಶ್ರೀವಾಣಿ ಯಕ್ಷಗಾನ ಸಭಾ ಯುವಕ ಮಂಡಲದ 55ನೇ ವಾರ್ಷಿಕೋತ್ಸವ ಪಟೇಲ್ ಮುದ್ದಣ್ಣ ಶೆಟ್ಟಿ ಸ್ಮಾರಕ ಜ್ಯೋತಿ ಕಲಾ ಮಂಟಪದಲ್ಲಿ ನಡೆಯಿತು.
ಶಾಶ್ವತ ಆರೋಗ್ಯ ನಿಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ವಿ.ಸುನೀಲ್ ಕುಮಾರ್, ಸಾಣೂರು ಯುವಕ ಮಂಡಲವು ಅನೇಕ ಮಾದರಿ ಕಾರ್ಯಕ್ರಮಗಳನ್ನು ಹಾಗೂ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುತ್ತ ಜನಪರ ಕಾರ್ಯಗಳನ್ನು ಮಾಡುತ್ತಿವೆ ಎಂದು ಶ್ಲಾಘಿಸಿದರು.
ಮೂಡುಬಿಕಿರೆ ಆಳ್ವಾಸ್ ಕಾಲೇಜಿನ ಆಡಳಿತಧಿಕಾರಿ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷೆತೆ ವಹಿಸಿದ್ದರು. ಡೊಮಿನಿಕ್ ಪಿಂಟೋ ವಾರ್ಷಿಕೋತ್ಸವ ಉದ್ಘಾಟಿಸಿದರು. ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಯುವರಾಜ್ ಜೈನ್, ಎಸ್‌ಕೆಎಫ್ ಆಡಳಿತ ನಿರ್ದೇಶಕ ಪ್ರಜ್ವಲ್ ಆಚಾರ್, ಡಾ.ಕಾರ್ತಿಕ್ ರಾವ್, ಮೂಡುಬಿದಿರೆ ವಲಯಾರಣ್ಯಧಿಕಾರಿ ಶ್ರೀಧರ್, ನರಸಿಂಹ ಕಾಮತ್, ಶ್ರೀರಾಮ್ ಭಟ್, ಡಾ.ಅಜಿತ್‌ಪ್ರಕಾಶ್, ದಯಾನಂದ ಶೆಟ್ಟಿ, ಯಶೋದಾ ಶೆಟ್ಟಿ, ಶ್ವೇತಾ ಡಿ.ಶೆಟ್ಟಿ, ಉದಯ ಸಾಲ್ಯಾನ್ ಉಪಸ್ಥಿತರಿದ್ದರು. ಗುರುಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಪ್ರಕಾಶ್ ರಾವ್ ವಾರ್ಷಿಕ ವರದಿ ವಾಚಿಸಿದರು. ಪ್ರಮಿತ್ ಸುವರ್ಣ ವಂದಿಸಿದರು. ಮೋಹನ್ ಶೆಟ್ಟಿ ನಿರೂಪಿಸಿದರು.

ಯಕ್ಷಶ್ರೀ ಪ್ರಶಸ್ತಿ ಪ್ರದಾನ

ದಿ.ಶ್ರೀಧರ್ ಪಾಂಡಿ ಸ್ಮರಣಾರ್ಥ ಕೊಡಮಾಡುವ ಯಕ್ಷಶ್ರೀ ಪ್ರಶಸ್ತಿಯನ್ನು ಮುರಳೀಧರ ಭಟ್ ಅವರಿಗೆ ಪ್ರದಾನಿಸಲಾಯಿತು. ಕರಾಟೆ ಮತ್ತು ಬಾಕ್ಸಿಂಗ್ ಪಟು ಪ್ರಖ್ಯಾತ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. 37 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಬಳಿಕ ಮೂವರಿಗೆ ಶಾಶ್ವತ ಆರೋಗ್ಯ ನಿಧಿ ಯೋಜನೆಯಿಂದ ನೆರವು ನೀಡಲಾಯಿತು. ಸಾರ್ವಜನಿಕ ಶೌಚಗೃಹವನ್ನು ಲೋಕಾರ್ಪಣೆಗೊಳಿಸಲಾಯಿತು.