ಪಂಚವರ್ಣ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಕೋಟತಟ್ಟು ನಿವಾಸಿ ಗುಳ್ಳಾಡಿ ಆನಂದ್ ಪೂಜಾರಿ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ಶರತ್ ಕುವಾರ್ ಶೆಟ್ಟಿ, ಸತೀಶ್ ಕುಂದರ್, ರಂಜಿತ್ ಕುವಾರ್ ಮೊದಲಾದವರಿದ್ದರು.  
ಉಡುಪಿ

ಪರಿಸರಸ್ನೇಹಿ ಕಾರ್ಯಕ್ರಮಕ್ಕಿದೆ ಜನಮನ್ನಣೆ

ಇಂದಿರಾ ಎನ್ ಕೆ
ಕೋಟ: ಪಂಚವರ್ಣ ಸಂಘಟನೆಯಿಂದ ರೈತ ಪರಿಸರಸ್ನೇಹಿ ಕಾರ್ಯಕ್ರಮಗಳು ಜನಮನ್ನಣೆ ಗಳಿಸಿವೆ ಎಂದು ಸಹಕಾರಿ ವ್ಯವಸಾಯಕ ಸಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಹೇಳಿದರು.
ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್, ರೈತಧ್ವನಿ ಸಂ, ಗೆಳೆಯರ ಬಳಗ, ಸ್ನೇಹಕೂಟ, ರೋಟರಿ ಕ್ಲಬ್ ಸಹಯೋಗದೊಂದಿಗೆ ‘ರೈತರೆಡೆಗೆ ನಮ್ಮ ನಡಿಗೆ’ 55ನೇ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೋಟತಟ್ಟು ನಿವಾಸಿ ಗುಳ್ಳಾಡಿ ಆನಂದ್ ಪೂಜಾರಿ ಅವರಿಗೆ ಸಕಡ್ ಫೌಂಡೇಶನ್ ಮುಖ್ಯಸ್ಥ ಕೋಟ ಶ್ರೀಕಾಂತ್ ಶೆಣೈ ರೈತ ಪುರಸ್ಕಾರ ನೀಡಿ ಗೌರವಿಸಿದರು. ಕೋಟತಟ್ಟು ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಸತೀಶ್ ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಕೋಟ ಸಹಕಾರಿ ವ್ಯವಸಾಯಕ ಸಂದ ನಿರ್ದೇಶಕ ರಂಜಿತ್ ಕುವಾರ್, ಸಾವಾಜಿಕ ಕಾರ್ಯಕರ್ತ ದಿನೇಶ್ ಗಾಣಿಗ, ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ರೈತಧ್ವನಿ ಸಂದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಪಂಚವರ್ಣ ಸಂಟನೆ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಮಹಿಳಾ ಮಂಡಲ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಸಂದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಸನ್ಮಾನ ಪತ್ರ ವಾಚಿಸಿದರು. ಸದಸ್ಯ ಪ್ರಭಾಕರ್ ಮಣೂರು ನಿರೂಪಿಸಿದರು. ರವೀಂದ್ರ ಕೋಟ ವಂದಿಸಿದರು.