ಉಡುಪಿಯ ಅಂಬಾಗಿಲಿನಿಂದ ಮಣಿಪಾಲ ಸಂಪರ್ಕಿಸುವ ಮುಖ್ಯರಸ್ತೆಯ ಪಕ್ಕದಲ್ಲಿ ನಡೆಯುತ್ತಿರುವ ಸರ್ಕಾರಿ ಕಾಮಗಾರಿ. 
ಉಡುಪಿ

ಇಲಾಖೆ, ಸಂಸ್ಥೆಗೆ ಅನ್ವಯಿಸದೆ ನಿಷೇಧಾಜ್ಞೆ?

* ಉಡುಪಿ ನಗರಸಭೆಗೆ ಸಾರ್ವಜನಿಕರ ಪ್ರಶ್ನೆ

* ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ?

ಉಡುಪಿ: 'ಬೇಲಿಯೇ ಎದ್ದು ಹೊಲ ಮೇಯ್ದಂಗೆ' ಎಂಬ ಗಾದೆ ಮಾತು ಇದೀಗ ಉಡುಪಿ ನಗರಸಭೆಯ ಅಧಿಕಾರಿಗಳಿಗೆ ಪೂರಕವಾಗಿದೆ. ಇದಕ್ಕೆ ಕಾರಣ, 'ಮಳೆಗಾಲ ಆರಂಭವಾಗಿದ್ದರಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಯಾವುದೇ ರಸ್ತೆ ಹಾಗೂ ಅಕ್ಕಪಕ್ಕದಲ್ಲಿ ಅಗೆತ ಮಾಡುವುದನ್ನು ನಗರಸಭೆ ನಿಷೇಧಿಸಿದೆ' ಎಂದು ಪೌರಾಯುಕ್ತರು ಪತ್ರಿಕಾ ಪ್ರಕಟಣೆ ನೀಡಿದ್ದರು.
ಉಡುಪಿಯ ನಗರಸಭೆ ಹೊರಡಿಸಿದ್ದ ಪ್ರಕಟಣೆ ಮಾಧ್ಯಮದಲ್ಲಿ ಪ್ರಕಟಗೊಂಡಿರುವುದು.
ಉಡುಪಿಯ ಅಂಬಾಗಿಲಿನಿಂದ ಮಣಿಪಾಲ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಮಳೆಗಾಲದ ಪ್ರಾರಂಭದಲ್ಲೇ ಉಡುಪಿ ನಗರಸಭಾ ನಡೆಸುತ್ತಿರುವ ಒಳಚರಂಡಿ ಮತ್ತು ಕುಡಿಯುವ ನೀರು ಯೋಜನೆಯ ಪೈಪ್​ ಬದಲಾವಣೆ ಮತ್ತು ಜೋಡಣೆ ಕಾಮಗಾರಿಗಾಗಿ ರಸ್ತೆ ಅಗೆದು ಆಳೆತ್ತರದ ಹೊಂಡಗಳು ರಸ್ತೆಯುದ್ಕಕೂ ಕಂಡು ಬರುತ್ತಿವೆ.
ರಸ್ತೆ ಬದಿಯಲ್ಲಿ ಅಗೆಯುವುದು, ಹೊಂಡ ತೆಗೆಯುವ ಕಾರ್ಯಕ್ಕೆ ನಿಷೇಧ ಇರುವುದು ಕೇವಲ ಸಾರ್ವಜನಿಕರಿಗೆ ಮಾತ್ರವೇ? ನಗರಸಭೆ ಮತ್ತು ಅವರ ಅಧೀನ ಸಂಸ್ಥೆಗೆ ಈ ನಿಷೇಧ ಅನ್ವಯವಾಗದೇ? ಇದೆಷ್ಟು ಸರಿ ಎಂದು ಉಡುಪಿಯ ನಗರ ವಾಸಿಗರು ಪ್ರಶ್ನಿಸಿದ್ದಾರೆ. 
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೆ ಸ್ಪಂದಿಸಿ ಮಳೆಗಾಲದ ಈ ಸಮಯದಲ್ಲಿ ತಾವುಗಳೂ ಸಹ ಕಾಮಗಾರಿ ನಿಲ್ಲಿಸಿ. ಸಾರ್ವಜನಿಕರಿಗೆ ಈ ರಸ್ತೆಯಲ್ಲಿ ನಿರ್ಭೀತಿಯಿಂದ ಓಡಾಡಲು ಅವಕಾಶ ಮಾಡಿಕೊಡಿ. 'ಬೇಲಿಯೇ ಎದ್ದು ಹೊಲ ಮೇಯ್ದಂತೆ' ಎಂಬ ಗಾದು ಮಾತು ಸುಳ್ಳಾಗಿಸಿ ಎಂದು ಸಲಹೆ ನೀಡಿದ್ದಾರೆ.