ಪ್ರಧಾನಿ ಮೋದಿ ಜನ್ಮದಿನಾಚರಣೆ ನಿಮಿತ್ತ ಬಿಜೆಪಿ ಜಿಲ್ಲಾ ಎಸ್​ಸಿ ಮೋರ್ಚಾ ವತಿಯಿಂದ ಬ್ರಹ್ಮಾವರದ 'ಅಪ್ಪ- ಅಮ್ಮ ಅನಾಥಾಲಯ'ದಲ್ಲಿ 'ಸೇವಾ ಸಂಕಲ್ಪ ಅಭಿಯಾನ' ನಡೆಯಿತು. ಕುತ್ಯಾರು ನವೀನ್​ ಶೆಟ್ಟಿ, ಕೃಷ್ಣಮೂರ್ತಿ ಡಿ.ಬಿ., ದಿನಕರ್​ ಬಾಬು, ಸದಾನಂದ್​ ಕೈಪುಂಜಾಲು, ಹಿರಿಯಣ್ಣ ಅಮ್ಮುಂಜೆ, ಅನಿತಾ ಸಾಲ್ಯಾನ್​, ಸದಾನಂದ ಚಾಂತಾರು, ಸುರೇಶ್​ ಮೂಡುಬಗೆ, ರೇವತಿ ಮಟಪಾಡಿ, ಗೋಪಾಲ್​ ಕಳಂಜೆ, ಸದಾನಂದ್​ ಬಳ್ಕೂರು, ಪೃಥ್ವಿರಾಜ್​ ಶೆಟ್ಟಿ ಇತರರಿದ್ದರು. 
ಉಡುಪಿ

ಅನಾಥರಿಗೆ ಅನ್ನದಾನ ಪುಣ್ಯದ ಕಾರ್ಯ

ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಅಭಿಪ್ರಾಯ

ಬ್ರಹ್ಮಾವರ ಅನಾಥಾಲಯದಲ್ಲಿ ಮೋದಿ ಜನ್ಮದಿನಾಚರಣೆ

ಉಡುಪಿ: ಜನ ಸೇವೆಯೇ ಈಶ ಸೇವೆ ಎಂದು ನಂಬಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಹಾಗೂ ತನ್ನಿಮಿತ್ತ ಸೇವಾ ಸಂಕಲ್ಪ ಅಭಿಯಾನ ಮುಂದುವರಿಸಿದ್ದೇವೆ. ತನ್ನಿಮಿತ್ತ 'ಅಪ್ಪ-ಅಮ್ಮ ಅನಾಥಾಲಯ'ದಲ್ಲಿ ಹಮ್ಮಿಕೊಂಡಿರುವ ಅನ್ನದಾನ ಮತ್ತು ಸಹ ಭೋಜನ ಪುಣ್ಯದ ಕಾರ್ಯವಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಹಾಗೂ ಅವರ ಜನಸೇವೆಯ ಆಡಳಿತದ 25 ವರ್ಷದ ಹಿನ್ನೆಲೆಯಲ್ಲಿ 'ಸೇವಾ ಸಂಕಲ್ಪ ಅಭಿಯಾನ'ದಡಿ ಬಿಜೆಪಿ ಜಿಲ್ಲಾ ಎಸ್​ಸಿ ಮೋರ್ಚಾ ವತಿಯಿಂದ ಬ್ರಹ್ಮಾವರದ ಕೂರಾಡಿಯಲ್ಲಿರುವ 'ಅಪ್ಪ- ಅಮ್ಮ ಅನಾಥಾಲಯ'ದಲ್ಲಿ ಬುಧವಾರ (ಸೆ.23) ಆಯೋಜಿಸಿದ್ದ 'ಅನ್ನದಾನ ಮತ್ತು ಸಹ ಭೋಜನ' ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಜೆಪಿ ಎಸ್​ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಡಿ.ಬಿ. ಕುಂದಾಪುರ ಅಧ್ಯಕ್ಷತೆ ವಹಿಸಿದ್ದರು.

ಎಸ್​ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ್​ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ್​ ಕೈಪುಂಜಾಲು, ಜಿಲ್ಲಾ ಉಪಾಧ್ಯಕ್ಷರಾದ ಹಿರಿಯಣ್ಣ ಅಮ್ಮುಂಜೆ, ಅನಿತಾ ಸಾಲ್ಯಾನ್​, ಜಿಲ್ಲಾ ಕಾರ್ಯದರ್ಶಿಗಳಾದ ಸದಾನಂದ ಚಾಂತಾರು, ಸುರೇಶ್​ ಮೂಡುಬಗೆ, ಸುಂದರ್​ ಬಿ. ಕಾರ್ಕಳ, ಉಡುಪಿ ಗ್ರಾಮಾಂತರ ಅಧ್ಯಕ್ಷ ಗಿರಿಧರ್​ ಬ್ರಹ್ಮಾವರ, ಕಾರ್ಯಕಾರಿಣಿ ಸದಸ್ಯೆ ರೇವತಿ ಮಟಪಾಡಿ, ಮಾಜಿ ಜಿಲ್ಲಾಧ್ಯಕ್ಷ ಗೋಪಾಲ್​ ಕಳಂಜೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸದಾನಂದ್​ ಬಳ್ಕೂರು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್​ ಶೆಟ್ಟಿ ಬಿಲ್ಲಾಡಿ, ಬಿಜೆಪಿ ಉಡುಪಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ದೇವಾನಂದ ನಾಯಕ್​, ಮಹಿಳಾ ಮೋರ್ಚಾ ಉಡುಪಿ ಗ್ರಾಮಾಂತರ ಅಧ್ಯಕ್ಷೆ ರಮ್ಯಾ ರಾವ್​ ಉಪಸ್ಥಿತರಿದ್ದರು.

ಎಸ್​ಸಿ ಮೋರ್ಚಾ ಬೈಂದೂರು ಅಧ್ಯಕ್ಷ ಅಶೋಕ್​ ಎನ್​.ಡಿ., ಉಪಾಧ್ಯಕ್ಷ ಪ್ರವೀಣ್​ ಗುಡ್ಡೆಯಂಗಡಿ, ಪ್ರಧಾನ ಕಾರ್ಯದರ್ಶಿ ಅಕ್ಷಯ್​, ಕುಂದಾಪುರ ಅಧ್ಯಕ್ಷ ಮಂಜುನಾಥ್​ ಬಳ್ಕೂರು, ಉಡುಪಿ ಗ್ರಾಮಾಂತರ ಉಪಾಧ್ಯಕ್ಷ ಪುಷ್ಪರಾಜ್​ ಉಳ್ಳಾಲ, ಜಿಲ್ಲಾ ಎಸ್​ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಯಶೋದಾ ಹಿರಿಯಡ್ಕ, ನಾಗರತ್ನಾ ಕುಂದಾಪುರ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.