ಕುಂದಾಪುರದ ಎಸಿ ಕಚೇರಿಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭೆ ನಡೆಸಿದರು. ಸಹಾಯಕ ಕಮಿಷನರ್​ ಮಹೇಶ ಇದ್ದರು. 
ಉಡುಪಿ

ಭೂಮಾಲೀಕರಿಗೆ 15 ದಿನದೊಳಗೆ ನೀಡಿ ಪರಿಹಾರ

* ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

* ರಾಷ್ಟ್ರೀಯ ಹೆದ್ದಾರಿ-169ಎ ಅಧಿಕಾರಿಗಳೊಂದಿಗೆ ಸಭೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ-169ಎ, ಉಡುಪಿ ಕರಾವಳಿ ಜಂಕ್ಷನ್​ ಮತ್ತು ಮಲ್ಪೆ ರಸ್ತೆಗೆ ಸಂಬಂಧಿಸಿ ಭೂ ಪರಿಹಾರ, ಜಂಟಿ ಖಾತೆಗಳ ಸರ್ವೇ, ಮೂಲಿಹಕ್ಕಿನ ವಿವಾದಗಳನ್ನು ಕೂಡಲೇ ಪರಿಹರಿಸಬೇಕು. ಮಲ್ಪೆ, ಕೊಡವೂರು ಭಾಗದ 50 ಮಂದಿ ಭೂ ಮಾಲೀಕರು ಮತ್ತು 25ಕ್ಕೂ ಅಧಿಕ ಜಂಟಿ ಖಾತೆದಾರರಿಗೆ 15 ದಿನದೊಳಗೆ ಮೂಲಿಹಕ್ಕು ಪರಿಹಾರ ನೀಡಬೇಕು ಎಂದು ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್​ ಮಹೇಶ ಅವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿ-169ಎ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ ಕುಂದಾಪುರ ಸಹಾಯಕ ಆಯುಕ್ತರ ಕಚೇರಿಯಲ್ಲಿ ಗುರುವಾರ (ನ.19) ಸಭೆ ನಡೆಸಿ, ಭೂಮಾಲೀಕರಿಗೆ ಹಣಪಾವತಿ ಹಾಗೂ ಕರಾವಳಿ-ಮಲ್ಪೆ ಸಂಪರ್ಕ ರಸ್ತೆ ನಿರ್ಮಾಣದ ಅಂತಿಮ ಹಂತದ ಸಭೆಯಲ್ಲಿ ಮಾತನಾಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು.

ಕಾರ್ಕಳ ತಾಲೂಕಿನ ಮಾಳಾ ಗ್ರಾಮದ 4 ಮಂದಿ, ಮಿಯಾರಿನ 19, ಮುಡಾರು ಮತ್ತು ಸಾಣೂರಿನ 39 ಮಂದಿಗೆ ಪರಿಹಾರ ನೀಡಲು ಅಗತ್ಯ ಕ್ರಮವಹಿಸಬೇಕು. ಹಿರಿಯಡ್ಕ ಪೇಟೆಯಲ್ಲಿ ಕಟ್ಟಡಗಳ ತೆರವುಗೊಳಿಸಲು ಇರುವ ಅಡೆತಡೆ ಪರಿಹರಿಸಿ ಸಮರ್ಪಕಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಎನ್​ಎಚ್​-169ಎ ಅಧಿಕಾರಿಗಳಾದ ಮಂಜುನಾಥ ಗೌಡ, ನವೀನ, ಉಡುಪಿ ನಗರಸಭಾ ಮಾಜಿ ಸದಸ್ಯರಾದ ಸುಂದರ ಕಲ್ಮಾಡಿ, ಗಿರೀಶ ಅಂಚನ್​, ಶಿವಪುರ ಸುರೇಶ ಶೆಟ್ಟಿ ಇತರರಿದ್ದರು.