ಮೆಸ್ಕಾಂ ವೈಫಲ್ಯ ಖಂಡಿಸಿ ನಡೆದ ಪಂಜಿನ ಮೆರವಣಿಗೆ ಪ್ರತಿಭಟನಾ ಜಾಥಾದಲ್ಲಿ ಶಾಸಕ ಯಶ್​ ಪಾಲ್​ ಸುವರ್ಣ ಮಾತನಾಡಿದರು.  
ಉಡುಪಿ

ತುಕ್ಕು ಹಿಡಿದ ರಾಜ್ಯ ಸರ್ಕಾರ: ಯಶ್ಪಾಲ್

ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ವತಿಯಿಂದ ಮೆಸ್ಕಾಂ ವೈಫಲ್ಯ ಖಂಡಿಸಿ ನಡೆದ ಪಂಜಿನ ಮೆರವಣಿಗೆ ಪ್ರತಿಭಟನಾ ಜಾಥಾ

ಉಡುಪಿ: ರಾಜ್ಯ ಸರ್ಕಾರ ಅನುದಾನ ನೀಡುವಲ್ಲಿ ಕರಾವಳಿ ಜಿಲ್ಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಆಡಳಿತ ವ್ಯವಸ್ಥೆಗೆ ತುಕ್ಕು ಹಿಡಿದಿದೆ. ಟ್ರಾನ್ಸ್​ಾರ್ಮರ್​ ಹಾಳಾದರೆ ರಿಪೇರಿಗೆ 3 ದಿನ ಬೇಕಾಗಿದೆ. ಕೇಬಲ್​ ತುಂಡಾದರೆ ಹೊಸತು​ ತೆಗೆದುಕೊಳ್ಳಲು ಸರ್ಕಾರದ ಬಳಿ ಹಣವಿಲ್ಲ ಎಂದು ಶಾಸಕ ಯಶ್​ ಪಾಲ್​ ಸುವರ್ಣ ಆರೋಪಿಸಿದರು.

ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ವತಿಯಿಂದ ಮೆಸ್ಕಾಂ ವೈಫಲ್ಯ ಖಂಡಿಸಿ ನಡೆದ ಪಂಜಿನ ಮೆರವಣಿಗೆ ಪ್ರತಿಭಟನಾ ಜಾಥಾದಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ 32 ಸಾವಿರ ಕೋಟಿ ರೂ. ಘೋಷಣೆ ಮಾಡಿ ಹೋದ ಕೂಡಲೇ ಹಣಕಾಸು ಇಲಾಖೆ ದುಡ್ಡಿಲ್ಲ ಎಂದು ಹೇಳಿದೆ. ಜನರನ್ನು ಮರಳು ಮಾಡುವ ಬದಲು ನೈಜ ಸಮಸ್ಯೆಗಳತ್ತ ಗಮನಹರಿಸಬೇಕು. ಪರೀೆ ಸಮಯದಲ್ಲಿ ಕರೆಂಟ್​ ತೆಗೆದರೆ ಜೆನ್​ ಝೀಗಳೂ ಪ್ರತಿಭಟನೆ ನಡೆಸಲಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಮೆಸ್ಕಾಂ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿ ಜಿಲ್ಲೆಯ ಜನತೆಗೆ ಗುಣಮಟ್ಟದ ವಿದ್ಯುತ್​ ಸರಬರಾಜು ಮಾಡುವಂತೆ ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷ ದಿನೇಶ್​ ಅಮೀನ್​, ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರಮುಖರಾದ ಪ್ರವಿಣ್​ ಶೆಟ್ಟಿ ಕಪ್ಪೆಟ್ಟು, ಸುಪ್ರಸಾದ್​ ಶೆಟ್ಟಿ, ಹೆರ್ಗ ದಿನಕರ ಶೆಟ್ಟಿ, ದಿನಕರ ಬಾಬು, ಪ್ರಭಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ಬೋರ್ಡ್​ ಹೈಸ್ಕೂಲ್​ ಬಳಿಯಿಂದ ಆರಂಭಗೊಂಡ ಪಂಜಿನ ಮೆರವಣಿಗೆ ಕೆ. ಎಂ. ಮಾರ್ಗವಾಗಿ ಸಾಗಿ ಡಯಾನಾ ಸರ್ಕಲ್​ನಿಂದ ಮೆಸ್ಕಾಂ ಕಚೇರಿ ಬಳಿ ಸಮಾಪನಗೊಂಡಿತು.