ಉಡುಪಿ: ನೂತನವಾಗಿ ನಿಮಾರ್ಣಗೊಂಡಿರುವ 110 ಕೋಟಿ ರೂ. ವೆಚ್ಚದ ಆಸ್ಪತ್ರೆಯಲ್ಲಿ ಹಳೆಯ ವೈದ್ಯಕಿಯ ಪರಿಕರಗಳನ್ನು ಅಳವಡಿಸಬಾರದು. ಅಗತ್ಯ ಸಿಬ್ಬಂದಿ ನೇಮಕ ಮಾಡಿದ ನಂತರ ಆಸ್ಪತ್ರೆಯಲ್ಲಿ ಸೇವೆ ಪ್ರಾರಂಭಿಸಬೇಕು. ಸರ್ಕಾರ ಈಗಾಗಲೇ 9 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಇದನ್ನು ಸದುಪಯೋಗಿಸಿಕೊಳ್ಳಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಹೇಳಿದರು.
ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ನೂತನವಾಗಿ ನಿಮಾರ್ಣಗೊಂಡಿರುವ ಹೊಸ ಉಡುಪಿ ಜಿಲ್ಲಾ ಆಸ್ಪತ್ರೆ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಐದು ಅಂತಸ್ತಿನ ಮಲ್ಟಿ ಸ್ಪೆಶಲಿಸ್ಟ್ ಆಸ್ಪತ್ರೆಗೆ ಸುಮಾರು 350 ರಿಂದ 400 ಜನ ಸಿಬ್ಬಂದಿ ಮತ್ತು ವೈದ್ಯರು ಬೇಕಾಗಿದ್ದಾರೆ. ಹಳೆಯ ಹಾಸ್ಪಿಟಲ್ ನಲ್ಲಿರುವ ಹಳೆಯ ವೈದ್ಯಕಿಯ ಪರಿಕರಗಳು, ಆಪರೇಶನ್ ಥಿಯೇಟರ್ಗೆ ಬೇಕಾದ ಹಳೆಯ ಮಿಶನರಿ, ಹಳೆಯ ಬೆಡ್ಗಳು ಮತ್ತು ಹಳೆಯ ಸರ್ಜಿಕಲ್ ಐಟಂ ಗಳನ್ನು ಹೊಸ ಆಸ್ಪತ್ರೆಗೆ ಸ್ಥಳಾಂತರ ಮಾಡುವುದನ್ನು ವಿರೋಧಿಸಲಾಗುವುದು ಎಂದು ಹೇಳಿದರು.
ಬಳಿಕ ಪ್ರತಿಭಟನಾ ತಂಡ ಜಿಲ್ಲಾ ಆಸ್ಪತ್ರೆಗೆ ತೆರಳಿ ಪ್ರಭಾರ ಜಿಲ್ಲಾ ಸರ್ಜನ್ ಡಾ. ವಾಸುದೇವ ಎಸ್. ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಮಹಿಳಾ ಘಟಕದ ಅಧ್ಯೆ ನಾಗಲಕ್ಷ್ಮೀ ಸುಬ್ರಮಣ್ಯ ನಗರ, ಕಾಪು ಘಟಕದ ಅಧ್ಯಕ್ಷ ನಿತೀನ್ ಕುಮಾರ್ ಶೆಟ್ಟಿ , ನಿರ್ಮಲ ಮೆಂಡನ್ ಹಾಗೂ ಶ್ಯಾಮಲಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರ್, ಅನುಸೂಯ ಶೆಟ್ಟಿ -, ಪವಿತ್ರ, ವನಿತಾ, ಗಾಯತ್ರಿ, ಪ್ರೀತಮ್ ಡಿಕೋಸ್ಟ, ಗುಣಕರ ಹಾಲಕ್ಕಿ ಮೊದಲಾದವರು ಉಪಸ್ಥಿತರಿದ್ದರು.