ಕೋಡಿ ಕನ್ಯಾಣದಲ್ಲಿ ಕೃಷಿಕರಿಂದ ಪ್ರತಿಭಟನೆ ನಡೆಯಿತು. ಪ್ರಮುಖರಾದ ಸುದಿನ ಕೋಡಿ, ರಾಜೇಶ್​ ಉಪಾಧ್ಯ, ಅನಂತ್​ ಹೊಳ್ಳ, ಮಹೇಶ್​ ಉಪಾಧ್ಯ ಮತ್ತಿತರರಿದ್ದರು. 
ಉಡುಪಿ

ಕೋಡಿ ಕನ್ಯಾಣದಲ್ಲಿ ಕೃಷಿಕರಿಂದ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಗದ್ದೆಗಳಿಗೆ ಉಪ್ಪು ನೀರು
  • ಮನವಿ ಮಾಡಿದರೂ ಪ್ರಯೋಜನ ಶೂನ್ಯ
  • ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ತೀವ್ರ
ವಿಜಯವಾಣಿ ಸುದ್ದಿಜಾಲ ಕೋಟ
ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಿ ಕನ್ಯಾಣದ ಭಾಗದಲ್ಲಿ ನೂರಾರು ಎಕರೆ ಕೃಷಿ ಭೂಮಿಗೆ ಸೀತಾನದಿಯ ಉಪ್ಪು ನೀರು ನುಗ್ಗಿ ಭಾರಿ ಪ್ರಮಾಣದಲ್ಲಿ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಕೃಷಿಕರು ಶನಿವಾರ ಪ್ರತಿಭಟನೆ ನಡೆಸಿದರು.

ಗದ್ದೆಗಳಿಗೆ ಉಪ್ಪು ನೀರು:

ಇಲ್ಲಿನ ನೂರಾರು ಎಕರೆಯಲ್ಲಿ ಭತ್ತ, ಉದ್ದು ಸೇರಿದಂತೆ ಹಲವು ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದು, ಇದೀಗ ಗದ್ದೆಗಳಿಗೆ ಉಪ್ಪು ನೀರು ಸೇರುತ್ತಿರುವುದರಿಂದ ಕೃಷಿಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನೊಂದು ವಾರದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ದೊಡ್ಡಮಟ್ಟದ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಸುದಿನ ಕೋಡಿ, ರಾಜೇಶ್​ ಉಪಾಧ್ಯ, ಅನಂತ್​ ಹೊಳ್ಳ, ಮಹೇಶ್​ ಉಪಾಧ್ಯ, ಪ್ರಕಾಶ್​ ನಾವಡ, ರಘುರಾಮ್​ ಇದ್ದರು.
"

ರಸ್ತೆ ಸೇರಿದಂತೆ ಬೇರೆ ಬೇರೆ ಕಾಮಗಾರಿಗಳಿಗೆ ಸಾಕಷ್ಟು ಹಣ ವ್ಯಯಿಸುವ ಸರ್ಕಾರ ದೇಶದ ಆರ್ಥಿಕತೆ ಮೂಲವಾದ ಕೃಷಿಕರಿಗೆ ಮೂಲಸೌಕರ್ಯ ನೀಡಲು ವಿಫಲವಾಗುತ್ತಿದೆ.

| ಲಕ್ಷ್ಮೀ ಮರಕಾಲ್ತಿ, ಕೃಷಿಕೆ

ಸೀತಾ ನದಿಯಲ್ಲಿ ಕಾಂಡ್ಲ ವನ ಸೃಷ್ಟಿಸಿದ್ದಾರೆ. ಕೃಷಿಕರಿಗೆ ಹಾನಿಗೈಯುವುದಕ್ಕೆ ಇದನ್ನು ಸೃಷ್ಟಿಸಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಇದರಿಂದ ನದಿ ತಟದಲ್ಲಿ ನೀರು ಸರಾಗವಾಗಿ ಹೋಗುತ್ತಿಲ್ಲ. ಹೊಳೆ ತಟಕ್ಕೆ ಶಾಶ್ವತ ತಡೆದಂಡೆ ನಿರ್ಮಿಸಿ ಕೃಷಿಕರಿಗೆ ಅನುಕೂಲಕರ ವಾತಾವರಣ ನೀಡಲಿ.

| ಬಚ್ಚ ಪೂಜಾರಿ, ಕೃಷಿಕ