ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಉಡುಪಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ಉಡುಪಿಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಉಡುಪಿ ಸರ್ವಿಸ್ ನಿಲ್ದಾಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕೆಎಂ ಮಾರ್ಗ, ಕೋರ್ಟ್ ರೋಡ್ ಮೂಲಕ ಸಾಗಿ ಜೋಡುಕಟ್ಟೆಯಲ್ಲಿ ರಸ್ತೆತಡೆ ನಡೆಸಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಎಪ್ರಿಲ್ 1 ರಿಂದ 4 ಲೇಬರ್ ಕೋಡ್ ಜಾರಿ ಮಾಡಬಾರದು ಎಂದು ಮನವಿ ಮಾಡಿದರು. ರಾಜ್ಯದಲ್ಲಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಕ್ಷಿಸಬೇಕು. ಅಂಗನವಾಡಿ ಬಿಸಿಯೂಟ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.
ಉಡುಪಿ ಜಿಲ್ಲಾ ಬ್ಯಾಂಕ್ ಅಧಿಕಾರಿಗಳು ಹಾಗೂ ನೌಕರರ ಸಂಘದ ನಾಗೇಶ್ ನಾಯಕ್ ಮಾತನಾಡಿ, ಕೇಂದ್ರ ಸರ್ಕಾರ ಈಗಾಗಲೇ ಹಲವು ಬ್ಯಾಂಕ್ಗಳನ್ನು ವಿಲೀನ ಗೊಳಿಸಿದ ಪರಿಣಾಮ ಹಲವು ಶಾಖೆಗಳು ಮುಚ್ಚಿವೆ. ಇದರಿಂದ ಮುಂದಿನ ಪೀಳಿಗೆ ಬಹಳಷ್ಟು ಉದ್ಯೋಗ ನಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರ ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಹಬಾಳ್ವೆ ಸಂಚಾಲಕ ಪ್ರೊ.ಫಣಿರಾಜ್, ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್, ಸಿಐಟಿಯು ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಕಟ್ಟಡ ಸಂಘದ ಅಧ್ಯಕ್ಷ ಸುಭಾಸ್ ನಾಯಕ್, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಸಂಜೀವ ಬಳ್ಳೂರು, ಎಐಟಿಯುಸಿ ಮುಖಂಡ ಶಶಿಕಲಾ, ಅಂಗನವಾಡಿ ಸಂಘ ಜಿಲ್ಲಾ ಅಧ್ಯಕ್ಷ ಭಾರತಿ ಎಸ್., ಬಿಸಿಯೂಟ ಸಂಘದ ಅಧ್ಯೆ ರತ್ನ, ಉಡುಪಿ ಬೀಡಿ ಕಾರ್ಮಿಕರ ಸಂಟನೆಯ ಮುಖಂಡರಾದ ಉಮೇಶ್ ಕುಂದರ್, ಜನರಲ್ ಯೂನಿಯನ್ ಕಾರ್ಯದರ್ಶಿ ರಮೇಶ್, ಸಿಐಟಿಯು ಮುಖಂಡರಾದ ನಳಿನಿ ಎಸ್., ರಾಮ ಕಾರ್ಕಡ, ಸರೋಜ, ಸಾರಿಕ, ಶಾರದ, ಶರ್ಮಿಳ, ಸೌಮ್ಯ, ಶ್ವೇತಾ, ಕುನುಮ, ಮಂಜುಳ ಗಿರಿಜ, ಸೈಯಾದ್, ಮುರಳಿ, ರಮೇಶ್ ಬ್ರಹ್ಮಾವರ, ರಮೇಶ್, ವಾಮನ ಪೂಜಾರಿ, ನಾಗರಾಜ್, ರಾಮ ಸಾಲ್ಯಾನ್, ಗಣೇಶ್ ನಾಯ್ಕ ಶೇಖರ್ ಆಚಾರ್ಯ, ಸದಾಶಿವ ಪೂಜಾರಿ, ಉಪಸ್ಥಿತರಿದ್ದರು.
ಬಡವರಿಗೆ ಕಾಂಗ್ರೆಸ್ ಸರ್ಕಾರ ಒದಗಿಸಿದ್ದ ಉದ್ಯೋಗದ ಹಕ್ಕು, ಅಹಾರದ ಹಕ್ಕು, ಮಾಹಿತಿ ಹಕ್ಕು ಹಾಗೂ ಶಿಕ್ಷಣದ ಹಕ್ಕುಗಳನ್ನು ಮೋದಿ ಸರ್ಕಾರ ಶಿಥಿಲಗೊಳಿಸುವ ಪ್ರಯತ್ನ ನಡೆಸುತ್ತಿದೆ. ಬಡವರನ್ನು ಇನ್ನಷ್ಟು ಬಡವರನ್ನಾಗಿಸಲು ಹಾಗೂ ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸಲು ಹಿಡೆನ್ ಅಜೆಂಡಾದೊಂದಿಗೆ ಕಾರ್ಯನಿರ್ವಹಿಸುತ್ತಿದೆ.