ಕಾಪು ಪಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತ ಸಂಭ್ರಮದ ಮನವಿ ಪತ್ರವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಬಿಡುಗಡೆಗೊಳಿಸಿದರು. ಪ್ರಮುಖರಾದ ಲಾಲಾಜಿ ಆರ್.ಮೆಂಡನ್, ಉಷಾ, ಸದಾಶಿವ ಶ್ರೀಯಾನ್ ಮತ್ತಿತರರಿದ್ದರು. 
ಉಡುಪಿ

ಕೀಳರಿಮೆ ಬಿಟ್ಟು ಶತಮಾನ ಕಂಡ ಶಾಲೆ ರಕ್ಷಣೆ

ಪಡುಬಿದ್ರಿ: ಕನ್ನಡ ಹೃದಯದ ಭಾಷೆಯಾಗಿದ್ದು, ಕೀಳರಿಮೆ ಬಿಟ್ಟು ಶತವಾನ ಕಂಡ ಶಾಲೆಯನ್ನು ಉಳಿಸುವ ಕಾರ್ಯವಾಗಬೇಕು. ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳನ್ನು ಜೋಡಿಸಿಕೊಂಡು ಅರ್ಥಪೂರ್ಣ ಕಾರ್ಯಕ್ರಮ ರೂಪಿಸಬೇಕು ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಕಾಪು ಪಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತ ಸಂಭ್ರಮದ ಮನವಿ ಪತ್ರವನ್ನು ಭಾನುವಾರ ಬಿಡುಗಡೆಗೊಳಿಸಿ ವಾತನಾಡಿದರು.
ಶತ ಸಂಭ್ರಮ ಸಮಿತಿ ಅಧ್ಯಕ್ಷ ಲಾಲಾಜಿ ಆರ್.ಮೆಂಡನ್ ವಾತನಾಡಿದರು. ಸಮಿತಿ ಗೌರವಾಧ್ಯಕ್ಷ ಸದಾಶಿವ ಶ್ರೀಯಾನ್, ಮುಂಬೈ ಸಮಿತಿಯ ಸೋಮನಾಥ್ ಕರ್ಕೇರ, ಉಪಾಧ್ಯಕ್ಷರಾದ ಶೀಲಾರಾಜ್ ಪುತ್ರನ್, ಮೊಹಮ್ಮದ್ ಶರ್ೀ, ಕಾರ್ಯಾಧ್ಯಕ್ಷರಾದ ಕುಶ ಎನ್.ಸಾಲ್ಯಾನ್, ಮೋಹನ್ ಬಂಗೇರ, ಮುಖ್ಯ ಶಿಕ್ಷಕಿ ಉಷಾ, ಮೊಗವೀರ ಮಹಾಸಭಾ ಅಧ್ಯಕ್ಷ ಸುಜಿತ್ ಸುವರ್ಣ, ಮೊಗವೀರ ಮಹಾಸಭಾ ಮಹಿಳಾ ವಿಭಾಗ ಉಪಾಧ್ಯಕ್ಷೆ ದಮಯಂತಿ, ಎಸ್‌ಡಿಎಂಸಿ ಅಧ್ಯಕ್ಷೆ ಸಂಗೀತ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಲಾಲಾಜಿ ಪುತ್ರನ್ ನಿರೂಪಿಸಿದರು.