ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ವಿಧುಶೇಖರ ಭಾರತೀತೀರ್ಥ ಸ್ವಾಮೀಜಿ ಅವರನ್ನು ಪೂರ್ಣಕುಂಭದೊಂದಿಗೆ ದೇಗುಲಕ್ಕೆ ಕರೆತರಲಾಯಿತು. ಪ್ರಮುಖರಾದ ಆನಗಳ್ಳಿ ಚೆನ್ನಕೇಶವ ಗಾಯತ್ರಿ ಭಟ್, ಶಿರಾಲಿ ವೆಂಕಟಾಪುರ ರಾಮಚಂದ್ರ ಭಟ್, ಲೋಕೇಶ್ ಅಡಿಗ ಬಡಾಕೆರೆ ಮೊದಲಾದವರಿದ್ದರು.
- ಶ್ರೀ ವಿಧುಶೇಖರ ಭಾರತೀತೀರ್ಥ ಸ್ವಾಮೀಜಿ ಆಶೀರ್ವಚನ
- ಉಪ್ಪುಂದ ಶ್ರೀ ಭದ್ರಕಾಳಿ ಮತ್ತು ಭೂತರಾಯ ದೇವಸ್ಥಾನದ ವರ್ಧಂತ್ಯುತ್ಸವ
- ಕೋಟಿ ಕುಂಕುಮಾರ್ಚನೆ ಪ್ರಯುಕ್ತ ಧಾರ್ಮಿಕ ಸಭೆ
ವಿಜಯವಾಣಿ ಸುದ್ದಿಜಾಲ ಬೈಂದೂರು
ಯಾವುದೇ ಸಮಾಜ ಉದ್ಧಾರವಾಗಬೇಕಾದರೆ ಅಲ್ಲಿ ಆಚಾರ-&ವಿಚಾರ, ದೇವರು& ಧರ್ಮವಿರಬೇಕು. ಆಗ ಮಾತ್ರ ಸಮಾಜದ ಸಮೃದ್ಧಿಯಾಗಿರಲು ಸಾಧ್ಯ ಎನ್ನುವುದು ತತ್ವಸಿದ್ಧಾಂತ. ನಮ್ಮ ಪೂರ್ವಜರು ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಉದ್ದೇಶದಿಂದ ಮಠ, ಮಂದಿರಗಳನ್ನು ನಿಮಾರ್ಣ ಮಾಡಿದ್ದು, ಇವುಗಳನ್ನು ನಾವುಗಳು ಉಳಿಸಿ ಬೆಳೆಸಬೇಕು ಎಂದು ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತೀತೀರ್ಥ ಸ್ವಾಮೀಜಿ ಹೇಳಿದರು.
ಉಪ್ಪುಂದ ಶ್ರೀ ಭದ್ರಕಾಳಿ ಮತ್ತು ಭೂತರಾಯ ದೇವಸ್ಥಾನದ 16ನೇ ವರ್ಷದ ವರ್ಧಂತ್ಯುತ್ಸವ ಹಾಗೂ ಕೋಟಿ ಕುಂಕುಮಾರ್ಚನೆ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ನಂಬಿಕೆಯಿಂದ ಪೂರ್ಣಾನುಗ್ರಹ:
ದೇವಾಲಯಗಳು ಸಗುಣೋಪಾಸನೆ ಮಾಡುವ ಪವಿತ್ರ ಸ್ಥಳ. ಇಲ್ಲಿನ ಅರ್ಚಕರು ವೇದ ಮಂತ್ರಗಳಿಂದ ನಿಯಮಾನುಸಾರ ಸಾತ್ವಿಕ ಕಾರ್ಯಗಳನ್ನು ನಡೆಸಬೇಕು. ದೇವಾಲಯಗಳಲ್ಲಿ ನಡೆಯುವ ಕರ್ಮಕ್ಕೆ ವಿಶೇಷ ಫಲ ದೊರಕುವುದಲ್ಲದೆ ಅಚಲವಾದ ನಂಬಿಕೆಯಿಂದ ಪ್ರಾರ್ಥಿಸಿದಲ್ಲಿ ದೇವರ ಪರಿಪೂರ್ಣ ಅನುಗ್ರಹವಾಗುತ್ತದೆ ಎಂದರು.
ಆನಗಳ್ಳಿ ಚೆನ್ನಕೇಶವ ಗಾಯತ್ರಿ ಭಟ್ ಹಾಗೂ ಶಿರಾಲಿ ವೆಂಕಟಾಪುರ ರಾಮಚಂದ್ರ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಶೃಂಗೇರಿ ಮಠದ ಪ್ರಾಂತೀಯ ಧಮಾರ್ಧಿಕಾರಿ ಲೋಕೇಶ್ ಅಡಿಗ ಬಡಾಕೆರೆ ಧಾರ್ಮಿಕ ಕಾರ್ಯ ನಿರ್ವಹಿಸಿದರು. ಶಾಸಕ ಗುರುರಾಜ್ ಗಂಟೆಹೊಳೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಶ್ರೀ ವರಲಕ್ಷಿ$್ಮ ಚಾರಿಟೆಬಲ್ ಟ್ರಸ್ಟ್ ಪ್ರವರ್ತಕ ಡಾ.ಗೋವಿಂದ ಬಾಬು ಪೂಜಾರಿ, ಜಿ.ಪಂ. ಮಾಜಿ ಸದಸ್ಯರಾದ ಎಸ್.ಮದನ್ ಕುಮಾರ್, ಗೌರಿ ದೇವಾಡಿಗ, ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ನಾಗೇಶ್ ಖಾರ್ವಿ, ಮೀನುಗಾರರ ಒಕ್ಕೂಟ ಅಧ್ಯಕ್ಷ ಕುಮಾರ್ ಖಾರ್ವಿ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಲಕ್ಷ$್ಮಣ ಖಾರ್ವಿ, ಉಪಾಧ್ಯಕ್ಷ ಶೇಖರ ಪೂಜಾರಿ ಮತ್ತಿತರರಿದ್ದರು. ರವಿ ಉಪ್ಪುಂದ ಸ್ವಾಗತಿಸಿದರು. ಆಚಾರ್ಯ ಕೇಶವ ಬೆಳ್ಳೆ ನಿರೂಪಿಸಿದರು.
ಸದ್ಭಾವನೆ, ಸದ್ಭಕ್ತಿ ಹಾಗೂ ಸಂಪ್ರೀತಿ ಸೇರಿಸಿಕೊಂಡು ಸಮಾಜ ಸಮಸ್ತ ಹಿಂದು ಬಾಂಧವರು ಧಾರ್ಮಿಕ ಪೂಜೆ ಮುಖೇನ ಸಮ್ಮಿಲನಗೊಂಡಿರುವುದು ಶ್ಲಾಘನೀಯ. ಇಂದಿನ ಯುವಕರ ಮನಸ್ಥಿತಿಯನ್ನು ಅರ್ಥೈಸಿಕೊಂಡು ಸಮಾಜವನ್ನು ಬೆಳೆಸಬೇಕಾಗಿದೆ. ಯುವಕರ ಕೈಗೆ ಜವಾಬ್ದಾರಿ ನೀಡಿದಾಗ ಮಾತ್ರ ಅವರ ಬದುಕು ಹಾಗೂ ಸಮಾಜ ಜಾಗೃತಗೊಳ್ಳುತ್ತದೆ.
| ಶ್ರೀ ವಿಧುಶೇಖರ ಭಾರತೀತೀರ್ಥ ಸ್ವಾಮೀಜಿ, ಶೃಂಗೇರಿ ಶಾರದಾ ಪೀಠಾಧೀಶ್ವರ