ಕೋಡಿಯ ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸ್ವಚ್ಛ ಕಡಲ ತೀರ- ಹಸಿರು ಕೋಡಿ 46ನೇ ಅಭಿಯಾನ ನಡೆಯಿತು. ಪ್ರಮುಖರಾದ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ, ಡಾ.ಆಸೀಫ್ ಬ್ಯಾರಿ, ಗೋಪಾಲ ಪೂಜಾರಿ ಮೊದಲಾದವರಿದ್ದರು
- ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಕಿವಿಮಾತು
- ಸ್ವಚ್ಛ ಕಡಲ ತೀರ- ಹಸಿರು ಕೋಡಿ 46ನೇ ಅಭಿಯಾನ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕಡಲು ಕೇವಲ ಮೀನುಗಳಿರುವ ಜಾಗವಲ್ಲ. ಬದಲಾಗಿ ಅದು ಜಲಚರ ಜೀವಸಂಕುಲಕ್ಕೆ ಆಧಾರ ಸ್ತಂಭ. ನಮ್ಮ ಊರಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪುಣ್ಯದ ಕೆಲಸವಾಗಿದೆ. ಜಲಮೂಲಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿರುವುದು ಶ್ಲಾಘನೀಯ ಎಂದು ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಹೇಳಿದರು.
ಕೋಡಿ ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ 'ಸ್ವಚ್ಛ ಕಡಲ ತೀರ- ಹಸಿರು ಕೋಡಿ' 46ನೇ ಅಭಿಯಾನದಲ್ಲಿ ಮಾತನಾಡಿದರು.
ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿ ಸದಸ್ಯ ಡಾ.ಆಸೀಫ್ ಬ್ಯಾರಿ, ಕೋಡಿ ಶ್ರೀ ಚಕ್ರೇಶ್ವರಿ ದೇವಸ್ಥಾನದ ಧರ್ಮದರ್ಶಿ ಗೋಪಾಲ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಪ್ರಭಾಕರ್ ಶೇರಿಗಾರ್, ಅಷ್ಪಾಕ್, ಬ್ಯಾರಿಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಮುಖ್ಯಸ್ಥರು, ಸಂಸ್ಥೆಯ ಬೋಧಕ - ಬೋಧಕೇತರ ಸಿಬ್ಬಂದಿ ಮತ್ತು ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪಾಲ್ಗೊಂಡರು. ಕನ್ನಡ ಉಪನ್ಯಾಸಕಿ ಸುಮನಾ ನಿರೂಪಿಸಿದರು.